ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಜನ್ಮದಿನದ ಅಂಗವಾಗಿ ಮೇ 15ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಆರ್.ಮೋಹನ್ ತಿಳಿಸಿದರು.
ಬೆಳಗ್ಗೆ 10ಕ್ಕೆ ಜೆಪಿಎನ್ ರಸ್ತೆಯ ಸರ್ವಸಿದ್ದಿ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಹಕ್ಕಿಪಿಕ್ಕಿ ಕ್ಯಾಂಪ್‌ನ ವಿದ್ಯಾರ್ಥಿಗಳೂ ಸೇರಿದಂತೆ 35 ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಾಧಕ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪುಸ್ತಕ ನೀಡಲಾಗುವುದು. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಎಲ್.ರಾಮೇಗೌಡ, ಎನ್.ಉಮಾಪತಿ, ಎಸ್.ಪಿ.ಶೇಷಾದ್ರಿ, ಎಸ್.ಆರ್.ಸೂರಪ್ಪ, ಸಿದ್ದಪ್ಪ, ಆಫ್ರಿದಿ ಮುಂತಾದವರನ್ನು ಸನ್ಮಾನಿಸಲಾಗುವುದು ಎಂದರು.
2001ರಲ್ಲಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ ಪ್ರಾರಂಭಿಸಲಾಯಿತು. ಇದುವರೆಗೂ ಈ ಸಂಘ ಸದೃಢ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಸಂಘದ ಪ್ರಮುಖರಾದ ಭದ್ರಾವತಿ ಗಣೇಶ್, ಪ್ರಕಾಶ್, ಸಿದ್ದಪ್ಪ, ಲೋಕೇಶ್, ಶಂಕ್ರ ನಾಯ್ಕ, ಸತ್ಯನಾರಾಯಣ ಮುಂತಾದವರಿದ್ದರು.