ಜಿಲ್ಲೆ

ಕೊಪ್ಪಳದಲ್ಲಿ 10 ಸಾವಿರ ಹೆಕ್ಟೇರ್​ ಹಾನಿ

ಕೊಪ್ಪಳ: ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗುರುವಾರ ಸುರಿದ ಗಾಳಿ&ಮಳೆಗೆ ಅಪಾರ ಹಾನಿ ಸಂಭವಿಸಿದೆ. ಕೃಷಿ, ತೋಟಗಾರಿಕೆ ಬೆಳೆಗಳು ಹಾಳಾಗಿದ್ದು, ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಸುಮಾರು 10,653 ಹೆಕ್ಟೇರ್​ನಷ್ಟು ಸಲು ಮಳೆಗೆ ಆಹುತಿಯಾಗಿದೆ.

ಕೊಪ್ಪಳ ನಗರ, ಹೊರವಲಯ, ಚುಕ್ಕನಕಲ್​, ಮುದ್ದಾಬಳ್ಳಿ, ಸಿಂದೋಗಿ, ಗಿಣಿಗೇರಾ, ಹಲಗೇರಾ. ಕೋಳೂರು ಸೇರಿ ವಿವಿಧ ಗ್ರಾಮಗಳಲ್ಲಿ ವರುಣ ಆರ್ಭಟಿಸಿದ್ದಾನೆ. ಮೆಕ್ಕೆಜೋಳ, ಭತ್ತ, ಮಾವು, ಪಪ್ಪಾಯ, ಲಿಂಬು, ಬಾಳೆ ಸೇರಿ ಇತರ ಬೆಳೆಗಳು ಹಾನಿಯಾಗಿವೆ. ಸಿಂಧೋಗಿ ರಸ್ತೆಯಲ್ಲಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದಿದೆ. ಬೆಳ್ಳುಳ್ಳಿ ಸಾಗಿಸುತ್ತಿದ್ದ ಆಟೋ ಪಲ್ಟಿಯಾಗಿದೆ. ಅಕ್ಕಿ, ಬೆಳ್ಳುಳ್ಳಿ ಮಣ್ಣುಪಾಲಾಗಿವೆ. ಕೊಪ್ಪಳ ನಗರದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ ಗಾಳಿ(48), ಗೋವಿಂದಪ್ಪ ಮ್ಯಾಗಳಮನಿ (62) ಮೃತರು. ತೋಟದ ಮನೆಯಲ್ಲಿದ್ದಾಗ ಸಿಡಿಲು ಬಡಿದಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ.

ಕಾರಟಗಿ, ಗಂಗಾವತಿ, ಕೊಪ್ಪಳ ತಾಲೂಕಿ ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿ ಭತ್ತ ಹಾನಿಯಾಗಿದೆ. ಗಂಗಾವತಿ ತಾಲೂಕಿನಲ್ಲಿ 3,925 ಹೆಕ್ಟೇರ್​, ಕಾರಟಗಿ 4,184 ಹೆಕ್ಟೇರ್​, ಕನಕಗಿರಿ 2,522 ಹೆಕ್ಟೇರ್​, ಕುಕನೂರು 10 ಹೆಕ್ಟೇರ್​ ಹಾಗೂ ಕೊಪ್ಪಳದಲ್ಲಿ ಸುಮಾರು 12ಹೆಕ್ಟೇರ್​ನಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ, ಕೃಷಿ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಸಮೀೆ ನಡೆಸುತ್ತಿದ್ದು ಒಂದೆರಡು ದಿನದಲ್ಲಿ ಹಾನಿ ನಷ್ಟ ಪ್ರಮಾಣ ತಿಳಿಯಲಿದೆ. ಮಳೆಗಿಂತ ಗಾಳಿ ಅಧಿಕ ಬೀಸಿದ್ದು, ತೋಟದ ಮನೆಗಳು, ದನದನ ಶೆಡ್​, ಅಂಗಡಿಗಳು, ಹೊರ ವಲಯದ ಹೋಟೆಲ್​ಗಳಲ್ಲಿ ವಸ್ತುಗಳು ಗಾಳಿಗೆ ಹಾರಿ ಹೋಗಿವೆ.