ಜಿಲ್ಲೆ

ಡಿಸೆಂಬರ್​ನೊಳಗೆ ಕಾಮಗಾರಿ ಪೂರ್ಣಗೊಳಿಸಿ...

ಅಧಿಕಾರಿಗಳಿಗೆ ಆಶಿಶ್​ ಕುಂದಾಲ್​ ಗಡುವು

ನೀರು ಸರಬರಾಜು, ನೈರ್ಮಲ್ಯ ಮಿಷನ್​ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯಲ್ಲಿ ಗ್ರಾಮೀಣ ಜನರಿಗೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಮುಂದಿನ ಡಿಸೆಂಬರ್​ ತಿಂಗಳೊಳಗೆ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಯೋಜನೆಯ ನೋಡಲ್​ ಅಧಿಕಾರಿ ಆಶಿಶ್​ ಕುಂದಾಲ್​ ಗಡುವು ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂನ್​ 13ರಂದು ಆಯೋಜಿಸಿದ್ದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್​ ಸಮಿತಿಯ ಸಭೆಯಲ್ಲಿ ಮಾತನಾಡಿದರು.

1,904 ಲಾನುಭವಿಗಳು

ಜಲ ಜೀವನ ಮಿಷನ್​ ಯೋಜನೆಯಡಿ ನಳದ ಮೂಲಕ ನೀರು ಒದಗಿಸುವ ಕಾರ್ಯ ಇದಾಗಿದೆ. ವಾರಾಹಿ ನದಿ ನೀರಿನ ಮೂಲದಿಂದ ಕಾರ್ಕಳ, ಹೆಬ್ರಿ ಹಾಗೂ ಕಾಪು ತಾಲೂಕಿನ 69 ಗ್ರಾಮಗಳ 1,904 ಲಾನುಭವಿಗಳಿಗೆ ಕುಡಿಯುವ ನೀರು ಒದಗಿಸಬೇಕಿದೆ. ಆದ್ಯತೆಯ ಮೇಲೆ ಕಾಮಗಾರಿ ಕೈಗೊಳ್ಳಬೇಕು ಎಂದರು. ಅಲ್ಲದೆ, ಬಹುಗ್ರಾಮ ಕುಡಿಯುವ ನೀರಿನ ಪೈಪ್​ಲೈನ್​ ಕಾಮಗಾರಿ, ನೀರು ಶುದ್ಧೀಕರಣ ಘಟಕ ಸೇರಿದಂತೆ ಇನ್ನಿತರ ಕಾಮಗಾರಿಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಕೇಂದ್ರ ಜಲ ಜೀವನ ಮಿಷನ್​ ಯೋಜನೆಯ ತಾಂತ್ರಿಕ ಸಹಾಯಕ ನಾರಾಯಣದಾಸ್​ ಮಿಶ್ರಾ, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯಕುಮಾರ್​ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಉದಯಕುಮಾರ್​ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಮೀಸಲು ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಅರಣ್ಯ ಪ್ರದೇಶಗಳಲ್ಲಿ ಪೈಪ್​ಲೈನ್​ ಕಾಮಗಾರಿ ಹಾದುಹೋಗಲಿದೆ. ಈಗಾಗಲೇ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ. ಯೋಜನೆಗೆ ಅಗತ್ಯವಿರುವ ವಿದ್ಯುತ್​ ಸಬ್​ಸ್ಟೇಷನ್​, ಪಂಪ್​ಹೌಸ್​, ಟ್ಯಾಂಕ್​ ನಿಮಾರ್ಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. | ಆಶಿಶ್​ ಕುಂದಾಲ್​. ಜಲ ಜೀವನ ಮಿಷನ್​ ನೋಡಲ್​ ಅಧಿಕಾರಿ