ಚಿತ್ರದುರ್ಗ: ಜಿಲ್ಲಾ ಪೊಲೀಸರು ಆರೋಗ್ಯ ಜಾಗೃತಿ ಸಲುವಾಗಿ ಡಿ. 26 ರಂದು ಬೆಳಗ್ಗೆ 7 ಕ್ಕೆ ಸೈಕಲ್ ಜಾಥಾ ಏರ್ಪಡಿಸಿದ್ದಾರೆ.
ನಗರದ ಚಳ್ಳಕೆರೆ ಸರ್ಕಲ್‌ನಿಂದ ಪ್ರಾರಂಭವಾಗುವ ಜಾಥಾ ನಗರದ ಪ್ರಮುಖ ರಸ್ತಗಳ ಮೂಲಕ ಚಂದ್ರವಳ್ಳಿ ತಲುಪಿ ನಂತರ ಅಲ್ಲಿಂದ ಒನಕೆ ಓಬವ್ವ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಜಾಥಾದಲ್ಲಿ ಸಾರ್ವಜನಿಕರು, ಪತ್ರಕರ್ತರು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಭಾಗವಹಿಸಲಿದ್ದಾರೆ.
ಆಸಕ್ತರು ತಮ್ಮ ಸೈಕಲ್‌ನೊಂದಿಗೆ ಭಾಗವಹಿಸಬಹುದು. ಅಂದು ಬೆಳಗ್ಗೆ 6 ರಿಂದ 7 ರೊಳಗೆ ಹೆಸರು ನೋಂದಾಯಿಸಬಹುದು.
ಭಾಗವಹಿಸಿದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಾಧಾನಕರ ಬಹುಮಾನ ವಿತರಿಸಲಾಗುವುದೆಂದು ಪೊಲೀಸ್ ಇಲಾಖೆ ತಿಳಿಸಿದೆ.