ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಒಲಿಂಪಿಕ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಸಹಯೋಗದಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಿನಿ ಒಲಿಂಪಿಕ್ಸ್ ಫಲಿತಾಂಶ ಇಂತಿದೆ.
14 ವರ್ಷದ ಬಾಲಕರ ವಿಭಾಗದ 600 ಮೀ. ಓಟದಲ್ಲಿ ಬಸಯ್ಯ ಪೂಜಾರ (ಪ್ರ), ಸಂದೀಪ ವಡ್ಡರ (ದ್ವಿ), ಅರ್ಜುನ ರಾಮಪ್ಪ (ತೃ), 100 ಮೀ. ಓಟದಲ್ಲಿ ಅರ್ಜುನ ಬ್ಯಾಕೋಡ (ಪ್ರ), ಹಿತಾಂಶ ಜೈನ್ (ದ್ವಿ), ಅಮೀರ ನರಗುಂದ (ತೃ) ಸ್ಥಾನ ಪಡೆದಿದ್ದಾರೆ.
ಉದ್ದ ಜಿಗಿತದಲ್ಲಿ ಸಂದೀಪ ವಡ್ಡರ (ಪ್ರ), ಅಮೀರ ನರಗುಂದ (ದ್ವಿ), ರೋಹಿತ ಪಾಟೀಲ (ತೃ), ಗುಂಡು ಎಸೆತದಲ್ಲಿ ವಿನಾಯಕ ಹಳ್ಳಿಕೇರಿ (ಪ್ರ), ಅಮೀರ ನರಗುಂದ (ದ್ವಿ), ಆಕಾಶ ಹುಡೇದ (ತೃ), 4*100 ಮೀ. ರಿಲೆಯಲ್ಲಿ ಖೇಲೋ ಇಂಡಿಯಾ ತಂಡ (ಪ್ರ), ಮನಗುಂಡಿಯ ಸರ್ಕಾರಿ ಪ್ರಾಥಮಿ ಶಾಲೆ ತಂಡ (ದ್ವಿ) ಹಾಗೂ ಕೆಲಗೇರಿಯ ಜೆಎಸ್ಎಸ್ ಪಬ್ಲಿಕ್ ಶಾಲೆ (ತೃ) ಸ್ಥಾನ ಪಡೆದಿವೆ.
ಇದಕ್ಕೂ ಪೂರ್ವದಲ್ಲಿ ಏರ್ಪಡಿಸಿದ್ದ ಸಮಾರಂಭವನ್ನು ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಉದ್ಘಾಟಿಸಿದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ವಸಂತ ಮುರ್ಡೇಶ್ವರ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ಕರಣ ದೊಡವಾಡ, ಇತರರು ಇದ್ದರು. ಮಾಜಿ ಮೇಯರ್ ಶಿವು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.