ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನ ಮಂಡಳಿಯ ಕಚೇರಿಯನ್ನು ಕ್ರಿಮ್ಸ್ ಭೋಧಕ ಆಸ್ಪತ್ರೆಯ ಮನೋ ವೈದ್ಯಕೀಯ ವಿಭಾಗದ ಕೊಠಡಿ ಸಂಖ್ಯೆ 111 ರಲ್ಲಿಅಧಿಕೃತವಾಗಿ , ಅಧ್ಯಕ್ಷರು ಹಾಗೂ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಕಿರಣ್ ಕಿಣಿ ರವರು ದಿನಾಂಕ 11.10.2025 ರಂದು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ , ದಿವ್ಯಶ್ರೀ ಸಿಎಂ, ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರ., ಡಾಕ್ಟರ್ ವಿಜಯರಾಜ ಎನ್, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಮನೋವೈದ್ಯಕೀಯ ವಿಭಾಗ, ಡಾಕ್ಟರ್ ಅಕ್ಷಯ ಪಾಠಕ, ಸಹ ಪ್ರಾಧ್ಯಾಪಕರು ಮನೋ ವೈದ್ಯಕೀಯ ವಿಭಾಗ, ಬಸವರಾಜ್ ಎಸ್. ಮುಳಗುಂದ,ಮನೋ ಸಾಮಾಜಿಕ ತಜ್ಞರು, ಮನೋ ವೈದ್ಯಕೀಯ ವಿಭಾಗ, ಕ್ರೀಮ್ಸ್ ಕಾರವಾರ ರವರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನ ಮಂಡಳಿಯ ಸಭೆಯನ್ನು ನಡೆಸಲಾಯಿತು.