ಜಿಲ್ಲೆ

ಏ.5ರಂದು ನೆಲ್ಯಾಡಿ ಬೆಥನಿ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

ಮಂಗಳೂರು: ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಮತ್ತು ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾಟ ಹಾಗೂ ಲೆಜೆಂಡ್ಸ್ ಟ್ರೋಫಿ ಏ.5ರಂದು ಸಂಜೆ 3ಕ್ಕೆ ನೆಲ್ಯಾಡಿ ಬೆಥನಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎನ್. ಸತೀಶ್ ಕುಮಾರ್ ಹೇಳಿದರು.

ಪಂದ್ಯಾಟದಲ್ಲಿ ಮಹಿಳೆಯರ ನಾಲ್ಕು ತಂಡಗಳು ಹಾಗೂ ಪುರುಷರ 12 ತಂಡಗಳು ಭಾಗವಹಿಸಲಿದೆ. ಇದರಲ್ಲಿ ಮೊದಲ ನಾಲ್ಕು ಸ್ಥಾನಗಳಿಗೆ ಶಾಶ್ವತ ಲಕ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ. ಪಂದ್ಯಾಟವನ್ನು ಉದ್ಯಮಿ ಕಿರಣ್‌ಚಂದ್ರ ಡಿ ಪುಷ್ಪಗಿರಿ ಉರುವಾಲು ಉದ್ಘಾಟಿಸಲಿದ್ದಾರೆ. ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ಇದರ ಅಧ್ಯಕ್ಷ ಡಾ.ವರ್ಗಿಸ್ ಕೈಪನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ತಂಡಗಳಿಗೆ ಉಚಿತ ಪ್ರವೇಶವಿದೆ ಎಂದು ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರ

ಉಪಾಧ್ಯಕ್ಷ ಲಿಲ್ಲಿ ಪಾಯಸ್ ಮಾತನಾಡಿ, ಶಾಲಾ ಮಕ್ಕಳ 14 ಮತ್ತು 17 ವಯೋಮಾನದ ಹುಡುಗ/ಹುಡುಗಿಯರ ಪಂದ್ಯಾಟ ಏ.12ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿ ತಾಲೂಕಿನಿಂದ ತಂಡವನ್ನು ಆಹ್ವಾನಿಸಿ, ಪ್ರತಿಭಾವಂತ ಆಟಗಾರರನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರನ್ನು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ ಎಂದರು.

ಈ ಸಂದರ್ಭ ಸಂಘಟಕರಾದ ಶಂಕರ್ ಶೆಟ್ಟಿ, ಮೋಹನ್ ಶಿರ್ಲಾಲು, ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ಇದರ ಕಾರ‌್ಯದರ್ಶಿ ಪ್ರಶಾಂತ್ ವರ್ಗಿಸ್, ಕೋಶಾಧಿಕಾರಿ ಜೋಶ್ ಕೆ.ಜೆ. ಉಪಸ್ಥಿತರಿದ್ದರು.