ಹುಬ್ಬಳ್ಳಿ: ಶಹರ ಶಾಲಾ ಶಿಕ್ಷಣ ಇಲಾಖೆಯಿಂದ ಇತ್ತೀಚೆಗೆ ಏರ್ಪಡಿಸಿದ್ದ 2024-25ನೇ ಸಾಲಿನ ಹುಬ್ಬಳ್ಳಿ ಶಹರ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಎಸ್.ಜೆ.ಎಂ.ವಿ.ಎಸ್ ಮಹಿಳಾ ಕಾಲೇಜಿನ 35 ವಿದ್ಯಾರ್ಥಿನಿಯರು ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಬಡ್ಡಿ, ಅಥ್ಲೆಟಿಕ್ಸ್ ಹಾಗೂ ಖೋ ಖೋದಲ್ಲಿ ಪ್ರಥಮ, ಬ್ಯಾಡ್ಮಿಂಟನ್ ಹಾಗೂ ಚೆಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪ್ರಮಾಣ ಪತ್ರ ಪಡೆದರು.
ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಅಧ್ಯಕ್ಷ ಅರವಿಂದ ಕುಬಸದ, ಪ್ರಾಚಾರ್ಯರಾದ ಅನುರಾಧ ಹೊಸಕೋಟಿ, ಡಾ. ಸಿಸಿಲಿಯಾ ಡಿಕ್ರೋಜ್, ದೈಹಿಕ ಶಿಕ್ಷಣ ನಿರ್ದೇಶಕರಾದ ಮಹೇಶ್ವರಿ ಉದಗಟ್ಟಿ, ಸುಚಿತ್ರಾ ಗಾಣಿಗೇರ ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.