ಜಿಲ್ಲೆ

ನ೧೧ರಿಂದ ೨೫ರವರೆಗೆ ಜಿಲ್ಲಾಮಟ್ಟದ ’ಗ್ರಾಮಾಂತರ ಹಿಂದು ಹಾಕಿ ಕಪ್’

ಮಡಿಕೇರಿ: ಎಂ.ಬಾಡಗ ಸ್ಫೋರ್ಟ್ ಮತ್ತು ಕಲ್ಚರಲ್ ಕ್ಲಬ್ ಭೇತ್ರಿ ವತಿಯಿಂದ ಜಿಲ್ಲಾ ಮಟ್ಟದ ಗ್ರಾಮ ಗ್ರಾಮಗಳ ನಡುವೆ ’ಕೊಡಗು ಗ್ರಾಮಾಂತರ ಹಿಂದು ಹಾಕಿ ಕಪ್-೨೦೨೨’ ನ೧೧ರಿಂದ ೨೫ರವರೆಗೆ ಮೂರ್ನಾಡುವಿನ ಲಾಲು ಮುದ್ದಯ್ಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಕಂಬೀರಂಡ ಸತೀಶ್ ಮುತ್ತಪ್ಪ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಗ್ರಾಮಗಳಲ್ಲಿರುವ ಹಾಕಿಪಟುಗಳನ್ನು ಒಂದೆಡೆ ಸೇರಿಸುವ ಉದ್ದೇಶ ಮತ್ತು ಗ್ರಾಮೀಣ ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಹಾಕಿಯ ತವರೂರಾದ ಕೊಡಗಿನಲ್ಲಿ ಪ್ರಕೃತಿ ವಿಕೋಪ ಹಾಗೂ ಕೋವಿಡ್-೧೯ರ ಕಾರಣದಿಂದ ಇತ್ತೀಚೆಗೆ ೫-ಎ ಸೈಡ್ ಹಾಗೂ ೭-ಎ ಸೈಡ್ ಹಾಕಿ ಪಂದ್ಯಾವಳಿಗಳು ಆಯೋಜಿಸಲಾಗುತ್ತಿತ್ತು. ಆದರೆ ೧೧ ಜನರ ಕ್ರೀಡಾ ಪಟುಗಳ ಹಾಕಿ ಪಂದ್ಯಾಟ ನಡೆದಿರುವುದಿಲ್ಲ. ಆ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾ ಪಟುಗಳಿಗೆ ಅವಕಾಶ ನೀಡುವ ಸಲುವಾಗಿ ’ಕೊಡಗು ಗ್ರಾಮಾಂತರ ಒಂದು ಹಾಕಿ ಕಪ್-೨೦೨೨’ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.


ಮೈದಾನ ಶುಲ್ಕ ೫೦೦೦ ನಿಗಧಿಯಾಗಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಗುವುದು. ಹೆಸರು ನೋಂದಾವಣೆ ಮಾಡಲು ಅ೩೧೧ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ೮೧೦೫೯೧೯೯೪೯-ಕಂಬೀರಂಡ ಸತೀಶ್, ೯೧೪೮೮೧೧೬೫೯ ಮುಕ್ಕಾಟಿರ ಕ್ಯಾರಿ ಕರುಂಬಯ್ಯ, ಸಂಪರ್ಕಿಸಬಹುದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಕಾರ್ಯದರ್ಶಿ ಮುಕ್ಕಾಟಿರ ಕ್ಯಾರಿ ಕರುಂಬಯ್ಯ, ಖಜಾಂಚಿ ನುಚ್ಚುಮಣಿಯಂಡ ಯಶ್ವಿನ್ ಪೊನ್ನಪ್ಪ, ನಿರ್ದೇಶಕರಾದ ಅಪ್ಪಚಂಡ.ಪಿ.ದೇವಯ್ಯ, ಬಾರಿಯಂಡ ಸುಬ್ರಮಣಿ, ಪಿ.ಲೋಕೇಶ್ ಇದ್ದರು.