ಜಿಲ್ಲೆ

ಆರ್ಥಿಕ ಸಮಾನತೆ ಸಾಧಿಸಲು ಗ್ಯಾರೆಂಟಿ ಯೋಜನೆ ಜಾರಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ದೇಶಕ್ಕೆ ಸ್ವಾತಂತ್ರ ಲಭಿಸಿ 76 ವರ್ಷ ಸಂದರೂ ಇನ್ನೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ದೇಶದ ಸಂಪತ್ತು ಕೆಲವೇ ಮಂದಿ ಶ್ರೀಮಂತರ ಪಾಲಾಗಿದ್ದು, ದುಡಿಯುವ ವರ್ಗಕ್ಕೆ ಪ್ರತಿಲ ಸಿಗುತ್ತಿಲ್ಲ. ಆರ್ಥಿಕ ಅಸಮಾನತೆ ತೊಡೆದು ಹಾಕುವ ಪ್ರಯತ್ನವಾಗಿ ಕನಿಷ್ಠ ತಿಂಗಳ ಆದಾಯ ಖಚಿತ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 5 ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಭಾನುವಾರ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು.

ಗೃಹಲಕ್ಷಿ$್ಮ ಯೋಜನೆಯಡಿ ರಾಜ್ಯದ 1.22 ಕೋಟಿ ಗೂ ಹೆಚ್ಚು ಬಡ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 2000 ರೂ. ನೆರವು ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಈವರೆಗೂ 365.42 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆಯ ಸೌಲಭ್ಯವನ್ನು ಪಡೆದಿದ್ದಾರೆ.

ಗೃಹಜ್ಯೋತಿ ಯೋಜನೆಯಲ್ಲಿ ಸುಮಾರು 1.63 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ವಿದ್ಯುತ್​ ಸೌಲಭ್ಯವನ್ನು ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಬಡವರಿಗೆ 5 ಕೆ.ಜಿ ಅಕ್ಕಿಯ ಜೊತೆಗೆ ಮನೆಗೆ ಅಗತ್ಯವಿರುವ ಇತರೆ ಧವಸಧಾನ್ಯಗಳನ್ನು ಕೊಳ್ಳಲು ಅನುಕೂಲವಾಗುವಂತೆ ಸುಮಾರು 1.19 ಕೋಟಿ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಕೂಡ ಖಾತೆಗೆ ಪ್ರತಿ ಸದಸ್ಯನಿಗೆ 170 ರೂ. ಜಮಾ ಮಾಡಲಾಗುತ್ತಿದೆ. ಯುವನಿಧಿಯಲ್ಲಿ ರಾಜ್ಯದಲ್ಲಿ 1.65 ಲಕ್ಷ ಅಭ್ಯರ್ಥಿಗಳಿಗೆ ಈವರೆಗೆ 252 ಕೋಟಿ ರೂ. ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದರು.

ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿ

ಸ್ವಾತಂತ್ರ$್ಯ ಪೂರ್ವದಲ್ಲಿ ರಾಜಮನೆತನಗಳ ಆಳ್ವಿಕೆಯಲ್ಲಿ ಪ್ರಜೆಗಳು ಆಳುಗಳಾಗಿ ದುಡಿಯುತ್ತಿದ್ದರು. ದೇಶದಲ್ಲಿ ಪ್ರಜೆಗಳಿಗೆ ಹಕ್ಕುಗಳೇ ಇರಲಿಲ್ಲ. ಮೇಲು ಜಾತಿ, ಕೆಳ ಜಾತಿ, ಲಿಂಗ ತಾರತಮ್ಯ ಮನೋಭಾವವಿತ್ತು. ಬ್ರಿಟಿಷರು ಸಮಾನತೆಯನ್ನು ಕೊಡಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯಿಂದ ಹಿಡಿದು ಸಫಾಯಿ ಕರ್ಮಚಾರಿಯವರೆಗೂ ಎಲ್ಲರೂ ಸಮಾನರಾಗಿದ್ದೇವೆ. ಭಾರತದ ಸಂವಿಧಾನದ ವೈಶಿಷ್ಟ$್ಯ. ಸ್ವಾತಂತ್ರ$್ಯ ಕೊಡುವ ಸಂದರ್ಭದಲ್ಲಿ ಬ್ರೀಟಿಷರು ಭಾರತ ಒಡೆದು ಹೋಗಲಿದೆ ಎಂಬುದಾಗಿ ಭಾವಿಸಿದ್ದರು. ಆದರೆ ಎಲ್ಲರ ಭವಿಷ್ಯ ನುಡಿಗಳು ಹುಸಿಯಾಗಿದ್ದು, ಪ್ರಜಾಪ್ರಭುತ್ವ ಯಶಸ್ವಿಯಾಗಿದೆ. ಪ್ರಪಂಚದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿಯನ್ನು ತುಂಬಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ. ದೇಶದಲ್ಲಿ ಆರ್ಥಿಕ ಅಸಮಾನತೆ, ಪ್ರಾದೇಶಿಕ ಅಸಮಾನತೆ, ಸಂಘರ್ಷಗಳು, ಬಡತನ ಜನರನ್ನು ಇಂದಿಗೂ ಸಹ ಕಾಡುತ್ತಿದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದರು.

ಶಾಸಕ ಯಶ್​ಪಾಲ್​ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ವಿಧಾನಪರಿಷತ್​ ಶಾಸಕ ಮಂಜುನಾಥ್​ ಭಂಡಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಅರುಣ್​ ಕೆ., ಕರಾವಳಿ ಕಾವಲು ಪೊಲೀಸ್​ ಅಧೀಕ್ಷಕ ಮಿಥುನ್​ ಎಚ್​.ಎನ್​., ಕಾರ್ಕಳ ವೈಲ್ಡ್​ಲೈಫ್​ ಡಿ.ಎಫ್​.ಓ ಶಿವರಾಮ ಎಂ. ಬಾಬು ಮತ್ತಿತರರು ಉಪಸ್ಥಿತರಿದ್ದರು.