ಜಿಲ್ಲೆ

ಜಿಲ್ಲಾಮಟ್ಟದ ಜ್ಯೂನಿಯರ್​ ಅಥ್ಲೆಟಿಕ್​ ಮೀಟ್​ ಉದ್ಘಾಟನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಿಲ್ಲಾ ಅಮೆಚ್ಯುರ್​ ಅಥ್ಲೆಟಿಕ್​ ಅಸೋಸಿಯೇಶನ್​ ವತಿಯಿಂದ ಜಿಲ್ಲಾ ಕಿರಿಯರ ಕ್ರೀಡಾಕೂಟ ಶನಿವಾರ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು.

ಶಾಸಕ ಯಶ್​ಪಾಲ್​ ಸುವರ್ಣ ಕ್ರೀಡಾಕೂಟ ಉದ್ಘಾಟಿಸಿದರು. ಜಿಲ್ಲಾ ಅಮೆಚ್ಯುರ್​ ಅಥ್ಲೆಟಿಕ್​ ಅಸೋಸಿಯೇಶನ್​ ಅಧ್ಯಕ್ಷ ಹರಿಪ್ರಸಾದ್​ ರೈ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್​ ಸೊರಕೆ, ಮಣಿಪಾಲ ವಿಕೆ ಗ್ರೂಪ್​ ಅಧ್ಯಕ್ಷ ಕೆ.ಎಂ.ಶೆಟ್ಟಿ, ಕರ್ನಾಟಕ ಅಥ್ಲೆಟಿಕ್​ ಅಸೋಸಿಯೇಶನ್​ನ ಉಪಾಧ್ಯಕ್ಷ ಮಹೇಶ್​ ಠಾಕೂರು, ಲಯನ್ಸ್​ ಜಿಲ್ಲಾ ಗವರ್ನರ್​ ಸ್ವಪ್ನಾ ಸುರೇಶ್​, ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಗ್ಯಾರಂಟಿ ಅನುಫಿ್ಠಾನ ಸಮಿತಿಯ ಅಧ್ಯಕ್ಷ ರಮೇಶ್​ ಕಾಂಚನ್​, ಉಡುಪಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ ಕುಮಾರ್​ ಶೆಟ್ಟಿ, ಉಡುಪಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್​ ಕೆ.ಜಿ., ಅಸೋಸಿಯೇಶನ್​ ಕೋಶಾಧಿಕಾರಿ ನಾರಾಯಣ ಪ್ರಭು ಉಪಸ್ಥಿತರಿದ್ದರು.

ಅಸೋಸಿಯೇಶನ್​ ಕಾರ್ಯದರ್ಶಿ ದಿನೇಶ್​ ಕುಮಾರ್​ ಎ. ಸ್ವಾಗತಿಸಿದರು. ರಾಮಚಂದ್ರ ಪಾಟ್ಕರ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್​ ಸಾಮಂತ್​ ಕಾರ್ಯಕ್ರಮ ನಿರೂಪಿಸಿದರು.