ಜಿಲ್ಲೆ

ಹಾನಗಲ್ಲನಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ 25ರಂದು

Haveri - Desk - Ganapati Bhat

ಹಾನಗಲ್ಲ: ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಪಟ್ಟಣದ ಎನ್​ಸಿಜೆಸಿ ಕಾಲೇಜ್ ಮೈದಾನದಲ್ಲಿ ಫೆ. 25ರಂದು ಬೆಳಗ್ಗೆ 8.30ಕ್ಕೆ ನಡೆಯಲಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕ ಹಾವೇರಿ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಶ್ವಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಪೊಲೀಸ್ ತರಬೇತಿ ಪಡೆದ ಶ್ವಾನಗಳ ಪ್ರದರ್ಶನವೂ ನಡೆಯಲಿದೆ. ಸಾರ್ವಜನಿಕರು ತಮ್ಮ ಶ್ವಾನಗಳನ್ನು ವಿಶೇಷವಾಗಿ ಅಲಂಕರಿಸಿ ಪ್ರದರ್ಶನಕ್ಕೆ ಕರೆತರುವಂತೆ ಪಶುವೈದ್ಯ ಇಲಾಖೆ ತಿಳಿಸಿದೆ.

2 ತಿಂಗಳ ಮೇಲ್ಪಟ್ಟ ಶ್ವಾನಗಳನ್ನು ಮಾತ್ರ ಪ್ರದರ್ಶನಕ್ಕೆ ತರಬೇಕು. ಶ್ವಾನಮರಿಗಳನ್ನು ಪ್ರತ್ಯೇಕ ವಿಭಾಗವಾಗಿ ಪರಿಗಣಿಸಲಾಗುವುದು. ತಳಿವಾರು ಉತ್ತಮ ಶ್ವಾನಗಳಿಗೆ ಬಹುಮಾನ ವಿತರಿಸಲಾಗುವುದು. ತಳಿವಾರು ವಿಭಾಗದಲ್ಲಿ ಬಹುಮಾನ ಪಡೆದ ಶ್ವಾನಗಳನ್ನು ಚಾಂಪಿಯನ್ ಸುತ್ತಿಗೆ ಪರಿಗಣಿಸಲಾಗುವುದು. ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಎಲ್ಲ ಶ್ವಾನಗಳಿಗೆ ಪಶುವೈದ್ಯ ಇಲಾಖೆ ವತಿಯಿಂದ ಉಚಿತವಾಗಿ ಜಂತುನಾಶಕ ಔಷಧ ಹಾಗೂ ರೇಬಿಸ್ ಲಸಿಕೆ ಹಾಕಲಾಗುವುದು ಎಂದು ತಿಳಿಸಲಾಗಿದೆ.