ಜಿಲ್ಲೆ

ಜಿಲ್ಲಾಮಟ್ಟದ ಸ್ವಚ್ಛತಾ ತರಬೇತಿ ತರಗತಿ ಉದ್ಘಾಟನೆ

ಸೌಮ್ಯ ಆರ್

ಪೆರ್ಲ: ಸಾಮಾನ್ಯ ಶಿಕ್ಷಣ ಇಲಾಖೆ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ‘ಜತೆಗಿದ್ದೇವೆ ಗಟ್ಟಿಗೊಳ್ಳಲು’ ಅಭಿಯಾನದ ಭಾಗವಾಗಿ ಆಯೋಜಿಸಿರುವ ‘ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ’ ವಿಷಯದ ಕುರಿತು ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಶೇಣಿ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟನೆಗೊಂಡಿತು.

ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಸಂತೋಷ್ ಕುಮಾರ್ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಮುಖ್ಯಶಿಕ್ಷಕ ಶಾಸ್ತಕುಮಾರ್ ಉದ್ಘಾಟಿಸಿದರು. ತ್ಯಾಜ್ಯಮುಕ್ತ ನವಕೇರಳದ ಜಿಲ್ಲಾ ಸಂಯೋಜಕ ಎಚ್.ಕೃಷ್ಣ ತರಗತಿಯ ನೇತೃತ್ವ ವಹಿಸಿ ಸ್ವಚ್ಛತಾ ಸಂದೇಶ ಹಂಚಿಕೊಂಡರು. ಗೆಳೆತನ ಕ್ಲಬ್ ಸಂಯೋಜಕ ತುಷಾರ ವಂದಿಸಿದರು.

ತರಬೇತಿಯ ಭಾಗವಾಗಿ ಶುಚಿತ್ವ ಮಿಷನ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ತರಗತಿ ಆಯೋಜಿಸಲಾಗುವುದು. ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು, ನೈರ್ಮಲ್ಯದ ನಡವಳಿಕೆ ಬೆಳೆಸುವ ಗುರಿ ಹೊಂದಿದೆ.