ಕಾರವಾರ: ಉತ್ತರ ಕನ್ನಡ (ಕಾರವಾರ) ಶೈಕ್ಷಣಿಕ ಜಿಲ್ಲೆಯ 15 ಶಿಕ್ಷಕರನ್ನು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿಡಿಪಿಐ ಲತಾ ನಾಯಕ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಲಾಯಿತು.
ಹೊನ್ನಾವರ ಮೂಡ ಗಣಪತಿ ದೇವಸ್ಥಾನದಲ್ಲಿ ಆಗಸ್ಟ್ 5 ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐ ಕಚೇರಿಯ ಪ್ರಕಟಣೆ ತಿಳಿಸಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ : ಶೈಲಾ ಸದಾನಂದ ಆಚಾರಿ, ಸಹ ಶಿಕ್ಷಕಿ ಸ.ಕಿ.ಪ್ರಾ.ಶಾ.ಹಬ್ಬುವಾಡ ತಾ:ಕಾರವಾರ, ರೇಣುಕಾ ಹೊನ್ನಪ್ಪ ನಾಯಕ, ಸ.ಕಿ.ಪ್ರಾ.ಶಾಲೆ ಬೆಳಸೆ ನಂ 2 ಶಿರೂರು ಕ್ಲಸ್ಟರ್ ಅಂಕೋಲ, ವಿದ್ಯಾಧರ ವೆಂಕಟ್ರಮಣ ಅಡಿ, ಸ.ಕಿ.ಪ್ರಾ.ಶಾಲೆ, ಕೆಳಗಿನ ಕಂದೊಳ್ಳಿ, ಕುಮಟಾ, ಶಾರದಾ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುರಕಳಿ ಖರ್ವಾ ತಾ.ಹೊನ್ನಾವರ, ರಾಮಚಂದ್ರ ದೇವಣ್ಣ ನಾಯಕ, ಸಹ ಶಿಕ್ಷಕರು, ಸ.ಕಿ, ಪ್ರಾ.ಕ.ಶಾಲೆ ನರೇಕುಳಿ ತಾ: ಭಟ್ಕಳ
ಹಿರಿಯ ಪ್ರಾಥಮಿಕ ಶಾಲಾ ವಿಭಾಗ : ವೀಣಾ ಆನಂದು ಗುನಗಿ, ಸಹ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವಗಡ , ಚಂದ್ರಕಲಾ ಗಣಪತಿ ನಾಯಕ, ಸ.ಶಿ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡ ಬೇಲೇಕೇರಿ ತಾ.ಅಂಕೋಲಾ , ಮಂಗಲಾ ಕೃಷ್ಣÀ್ಣಪ್ಪ ನಾಯ್ಕ, ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ, ತಾ:ಕುಮಟಾ , ಉದಯ ರಾಮಚಂದ್ರ ನಾಯ್ಕ,ಮುಖ್ಯಾಧ್ಯಾಪಕರು(ಪ್ರಭಾರ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿ ತಾ:ಹೊನ್ನಾವರ , ಹೇಮಾವತಿ ಎಸ್. ನಾಯ್ಕ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ತಾ: ಭಟ್ಕಳ.
ಪ್ರೌಢಶಾಲಾ ವಿಭಾಗ: , ಸ್ಮಿತಾ ಆತ್ಮಾರಾಮ ನಾಯ್ಕ, ಸಹ ಶಿಕ್ಷಕಿ ಸರಕಾರಿ ಪ್ರೌಢಶಾಲೆ ತೋಡೂರು, ಎಸ್.ನಾಗರಾಜ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಬೇಲೇಕೇರಿ, ತಾ.ಅಂಕೋಲ, ಮಡಿವಾಳಪ್ಪ ಶಿವಪ್ಪ ದೊಡಮನಿ, ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಶಾಂತಿಕಾAಬ - ಪ್ರೌಢಶಾಲೆ ಹೆಗಡೆ ತಾ:ಕುಮಟಾ , ಲಂಬೋದರ ಮಂಜುನಾಥ ಹೆಗಡೆ ಮುಖ್ಯ ಶಿಕ್ಷಕರು ಶ್ರೀ ಚನ್ನಕೇಶವ ಪ್ರೌಢಶಾಲೆ ಕರ್ಕಿ, ತಾ:ಹೊನ್ನಾವರ ಡಾ.ಸುರೇಶ ಎಂ. ತಾಂಡೇಲ ಸ.ಶಿ. ಸರಕಾರಿ ಪ್ರೌಢಶಾಲೆ ಕುಂಟವಾಣಿ ತಾ. ಭಟ್ಕಳ