ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಬುಧವಾರ ಜಿಪಂ ತೆಮಾಸಿಕ ಕೆಡಿಪಿ ಸಭೆ ನಡೆಯಿತು. ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ದೊಡ್ಡನಗೌಡ ಪಾಟೀಲ್​, ರಾವೇಂದ್ರ ಹಿಟ್ನಾಳ, ಜನಾರ್ದನರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ ಇದ್ದರು. 
ಜಿಲ್ಲೆ

ಜಿಲ್ಲಾಸ್ಪತ್ರೆ ಅವ್ಯವಸ್ಥೆ ಶ್ರೀ ಸರಿಯಾಗಬೇಕು, ವೈದ್ಯಾಧಿಕಾರಿಗಳಿಗೆ ಸಚಿವ ತಂಗಡಗಿ

ಕೊಪ್ಪಳ: ಜಿಲ್ಲಾಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ಕಳೆದ ಬಾರಿಯೂ ಈ ಬಗ್ಗೆ ಎಚ್ಚರಿಸಲಾಗಿತ್ತು. ಆದರೂ ಸುಧಾರಣೆ ಆಗಿಲ್ಲ. ಹೀಗೆ ಮುಂದುವರಿದರೆ ನಡೆಯಲ್ಲ. ಶ್ರೀ ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿಂದುಳಿದ ವರ್ಗಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಪಂ ತೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಆಡಳಿತ ಹಿಡಿತವಿಲ್ಲ. ಲ್ಯಾಪ್​ಟಾಪ್​, 4 ಲಕ್ಷ ರೂ.ಗೆ ಸಿಗುವ ಮಷೀನ್​ 49 ಲಕ್ಷ ರೂ.ಗೆ ಖರೀದಿಸಲಾಗಿದೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಪ್ರತಿ ವರ್ಷ ಕಾಲೇಜು ಮಾನ್ಯತೆ ನವೀಕರಿಸಬೇಕು. ರಾಜ್ಯದ ಎಲ್ಲ ಕಾಲೇಜುಗಳು ನವೀಕರಿಸಿವೆ. ಕೊಪ್ಪಳ ಕಿಮ್ಸ್​ ಮಾತ್ರ ಮಾಡಿಲ್ಲ. 35 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಕ್ಕೆ ಯಾರು ಜವಾಬ್ದಾರಿ ? ರೋಗಿಗಳಿಗೆ ಗೌರವಿಲ್ಲ. ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಸರಿಯಾದ ಮಾಹಿತಿ ಇಲ್ಲ. ಆಪರೇಷನ್​ ಮಾಡಿಸಿಕೊಳ್ಳಲು 3 ತಿಂಗಳು ಸಮಯ ಕೊಡುತ್ತೀರಿ. ನಿಮಗೆ ಮನುಷ್ಯತ್ವ ಇದೆಯಾ ಎಂದು ಕಿಮ್ಸ್​ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಕಿಮ್ಸ್​ ನಿರ್ದೇಶಕ ಡಾ.ವಿಜಯನಾಥ ಇಟಗಿ ಉತ್ತರಿಸಿ, ಐಸಿಯು, ತುರ್ತು ಚಿಕಿತ್ಸಾ ವಿಭಾಗ ಸರಿಯಾಗಿ ನಿರ್ವಹಣೆ ಆಗುತ್ತಿವೆ. ಒಂದು ವರ್ಷದಲ್ಲಿ 2.33 ಲಕ್ಷ ಹೊರ ರೋಗಿಗಳು, 33 ಸಾವಿರ ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಲ್ಯಾಪ್​ಟಾಪ್​, ಮಷೀನ್​ ಖರೀದಿಸಲಾಗಿದೆ. ಉತ್ತಮ ಚಿಕಿತ್ಸೆ ಕೊಡುತ್ತಿದ್ದೇವೆಂದರು.

ಸಂಸದ ರಾಜಶೇಖರ ಹಿಟ್ನಾಳ, ಸ್ಕಾನಿಂಗ್​, ಡಯಾಲಿಸಿಸ್​, ಇಎನ್​ಟಿ, ಆರ್ಥೊ ಸೇರಿ ಯಾವೊಂದು ಸೇವೆ ಸರಿಯಾಗಿಲ್ಲವೆಂದರು. ವಿಪ ಸದಸ್ಯೆ ಹೇಮಲತಾ, ರೋಗಿಗಳಿಗೆ ಸರಿಯಾದ ಸ್ಪಂದನೆ ಇಲ್ಲ. ನಾವು ಕರೆ ಮಾಡಿ ಹೇಳಿದರೂ ವೈದ್ಯಾಧಿಕಾರಿಗಳು ಸ್ಪಂದಿಸುವುದಿಲ್ಲವೆಂದು ಆರೋಪಿಸಿದರು. ಶಾಸಕ ರಾವೇಂದ್ರ ಹಿಟ್ನಾಳ, ಸಭೆಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ವಾರ್ಷಿಕ ಅನುದಾನ, ಖರ್ಚು, ವೆಚ್ಚದ ವಿವರ ಯಾಕೆ ಕೊಡುವುದಿಲ್ಲ. 210 ಕೋಟಿ ರೂ. ನಲ್ಲಿ 11 ಕೋಟಿ ರೂ. ವ್ಯತ್ಯಾಸ ಬರುತ್ತಿದೆ. ಹೀಗಾದರೆ ಹೇಗೆಂದು ತರಾಟೆ ತೆಗೆದುಕೊಂಡರು. ಸಚಿವರು, ಇದು ಜನರ ದುಡ್ಡು. ಏನೇನೋ ಕಥೆ ಹೇಳಬೇಡಿ. ನಿಮ್ಮನ್ನು ನೋಡಿ ಎಲ್ಲರು ನಗುವಂತಾಗಿದೆ ಎಂದು ರೇಗಿದರು. ಡಿಸಿಗೆ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಡಿಎಚ್​ಒ ಡಾ.ಟಿ.ಲಿಂಗರಾಜು ಮಾತನಾಡಿ, ಕುಕನೂರು, ಕನಕಗಿರಿ, ಕಾರಟಗಿ ತಾಲೂಕು ಆಸ್ಪತ್ರೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ತಾಲೂಕು ಆಸ್ಪತ್ರೆಯಲ್ಲಿ ಸಿಟಿ ಸ್ಕಾ$ನ್​ ಸೇವೆ ಆರಂಭಿಸಲಾಗಿದೆ. 68 ವೈದ್ಯರ ಹುದ್ದೆ ಖಾಲಿ ಇವೆ. ಸಿಟಿ ಸ್ಕಾ$ನ್​ ನಿರ್ವಹಣೆಗೆ ನೇಮಿಸಿಕೊಂಡ 18 ಸಿಬ್ಬಂದಿಗೆ ವೇತನ ನೀಡಿಲ್ಲ. ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು. ಕುಷ್ಟಗಿ ಶಾಸಕ ದೊಡ್ಡನಗೌಡ ಕೆಲಸ ಮಾಡಿಸಿಕೊಂಡು ಸಂಬಳ ನೀಡಿಲ್ಲ. ಕೆಲಸದಿಂದ ತೆಗೆದಿದ್ದೀರಿ. ತಾವರಗೇರಾ ವೈದ್ಯರನ್ನು ಬದಲಾಯಿಸುವಂತೆ ಆಗ್ರಹಿಸಿದರು. ಸಚಿವರು, ಈ ಬಗ್ಗೆ ಇಲಾಖೆ ಸಚಿವರೊಂದಿಗೆ ಮಾತನಾಡುವೆ. ಹೊಸ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಅಂತಿಮಗೊಂಡಿದೆ. ಕೆಕೆಆರ್​ಡಿಬಿಯಿಂದ ಅನುದಾನ ಒದಗಿಸಲಾಗುವುದೆಂದರು.

ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಸಿರವಾರ ತೋಟಗಾರಿಕೆ ಟೆಕ್​ ಪಾರ್ಕ್​ಗೆ 87 ಎಕರೆ ಜಾಗ ಅವಶ್ಯವಿದ್ದು, ರೈತರು ನೀಡುತ್ತಿಲ್ಲವೆಂದರು. ಸಚಿವರು ಮಾತನಾಡಿ, ಒಟ್ಟು 200 ಎಕರೆ ಬೇಕಿದೆ. 87 ಎಕರೆ ಭೂಸ್ವಾಧಿನಕ್ಕೆ ರೈತರ ಮನವೊಲಿಸಿ. ಆಗದಿದ್ದಲ್ಲಿ ನವಲಿ ರೈಸ್​ಟೆಕ್​ ಪಾರ್ಕ್​ಗಾಗಿ ಖರೀದಿಸಿದ ಜಾಗ ಇದೆ. ಅದರಲ್ಲಿ 100 ಎಕರೆ ನೀಡುತ್ತೇವೆ. ಬೇಕಿದ್ದರೆ ಅಲ್ಲಿ ಮಾಡಬಹುದು. ಇದಕ್ಕೆ ಒಪ್ಪಿದರೆ ಮುಂದುವರೆಯೋಣ. ಇಲ್ಲದಿದ್ದರೆ ಬೇಡ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ದೊಡ್ಡನಗೌಡ, ಎಲ್ಲ ಯೋಜನೆಗಳಿಗೆ ಕೇವಲ ಕೇಂದ್ರದ ಅನುದಾನ ಬಂದಿದೆ. ರಾಜ್ಯದಿಂದ ಬಂದಿಲ್ಲವೆಂದು ಕಿಚಾಯಿಸಿದರು. ಸಚಿವರು, ಬಿಡುಗಡೆ ಮಾಡಿಸುವುದಾಗಿ ಹೇಳಿದರು.

ಕೃಷಿ ಜೆಡಿ ರುದ್ರೇಶಪ್ಪ ಮಾತನಾಡಿ, ಈ ವರ್ಷ ಉತ್ತಮ ಮಳೆಯಾಗಿದೆ. ಕಳೆದ ವರ್ಷ ಮಳೆಯಾಗದ ಕಾರಣ ರಸಗೊಬ್ಬರ ಉಳಿದುಕೊಂಡಿದೆ. ಈ ವರ್ಷಕ್ಕೆ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಲಾಗಿದೆ. 303 ಕೃಷಿ ಹೊಂಡ ನಿರ್ಮಿಸಲಾಗಿದೆ. ಶೇ.83ರಷ್ಟು ಇಕೆವೈಸಿ ಮಾಡಿದ್ದೇವೆ. ಪಿಎಂ ಕಿಸಾನ್​ ಅಡಿ ರೈತರಿಗೆ ಸಹಾಯಧನ ಬರುತ್ತಿದೆ. ಕಳಪೆ ಬಿತ್ತನೆ ಬೀಜ ಕುರಿತು 13 ಪ್ರಕರಣ ದಾಖಲಾಗಿವೆ. 7ರಲ್ಲಿ ವಿಚಾರಣೆ ಮುಂದುವರೆದಿದೆ ಎಂದರು. ಸಚಿವರು, ಕೇಲವ ಪ್ರಕರಣ ದಾಖಲಿಸಿದರೆ ಸಾಲದು. ಕ್ರಮವಾಗಬೇಕು. ಭತ್ತ ನಾಟಿಗೆ ಬಿತ್ತನೆ ಬೀಜ ವಿತರಿಸಿ. ಕೃಷಿ ಯಂತ್ರಧಾರೆ ಪ್ರಕರಣ ಪರಿಹರಿಸಿ. ಸಿದ್ದಾಪುರ ಕೃಷಿ ಕೇಂದ್ರವನ್ನು 50 ಲಕ್ಷ ರೂ. ಖರ್ಚು ಮಾಡಿ ಬುನಾದಿ ಇಲ್ಲದೆ ನಿರ್ಮಿಸಿದ್ದೀರಿ ಹೇಗೆಂದು ಪ್ರಶ್ನಿಸಿದರು.

ಕೆಆರ್​ಐಡಿಎಲ್​ ಇಇ ಝಡ್​.ಎಂ.ಚಿಂಚೋಳಿಕರ್​ ಉತ್ತರಿಸಿ, ಎಸ್ಟಿಮೇಟ್​ನಂತೆ ಕಟ್ಟಿದ್ದೇವೆ ಎಂದರು. ಇದಕ್ಕೆ ಗರಂ ಆದ ಸಚಿವರು, ಇದೇನು ಹೊಸ ಟೆಕ್ನಾಲಜಿನಾ ? ನೀನು ಇಂಜಿನಿಯರಿಂಗ್​ ಕಲಿತಿರುವೆಯಾ ಅಥವಾ ಬೇರೆನಾ ? ಬಾಯಿಗೆ ಬಂದಂತೆ ಸುಳ್ಳು ಹೇಳಬೇಡ ಎಂದು ಗದರಿದರು. ಥರ್ಡ್​ ಪಾರ್ಟಿಯವರು ಏನು ಮಾಡುವರು ಎಂದು ಶಾಸಕ ಹಿಟ್ನಾಳ ಕೇಳಿದರು. ಪಿಡಬ್ಲೂಡಿ ಅಧಿಕಾರಿಗಳು ವಾರದಲ್ಲಿ ಸಮೀೆ ನಡೆಸಿ ವರದಿ ಸಲ್ಲಿಸಿ. ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಾಗುವುದೆಂದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ, ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇತರರಿದ್ದರು.

ಗ್ಯಾರಂಟಿಗಳಿಂದ ಅನುಕೂಲ
ಶಕ್ತಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 57.84 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಗೃಹಲಕ್ಷಿ$್ಮಯಡಿ 3,17,762 ಫಲಾನುಭವಿಗಳು ನೋಂದಾಯಿಸಿದ್ದು, 578,08,38,000 ಹಣ ಪಡೆದಿದ್ದಾರೆ. 3,27,110 ಫಲಾನುಭವಿಗಳು ಅನ್ನಭಾಗ್ಯ ಯೋಜನೆಗೆ ಅರ್ಹರಿದ್ದು, 2,96,404 ಕುಟುಂಬಗಳಿಗೆ ಪ್ರತಿ ತಿಂಗಳು 18.10 ಕೋಟಿ ಹಣ ಜಮಾ ಮಾಡಲಾಗುತ್ತಿದೆಯೆಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು. ಸಚಿವರು ಬಾಕಿ ಜನರಿಗೆ ಬರುವಂತೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಹೇಮಲತಾ ನಾಯಕ, ಇಷ್ಟೊಂದು ಉಚಿತ ನೀಡಿ ಲಾಭ ಹೇಗಾಗುತ್ತದೆ ಎಂದರು. ನೀವು ಮಹಿಳೆಯರ ವಿರುದ್ಧವಾ ಎಂದು ಸಚಿವರು ಪೇಚಿಗೆ ಸಿಲುಕಿಸಿದರು. ಅಲ್ಲ, ಮಹಿಳೆಯರನ್ನು ಅರ್ಧಕ್ಕೆ ಇಳಿಸುವ ಟನೆ ನಡೆಯುತ್ತಿವೆ ಎಂದರು. ಈ ಬಗ್ಗೆ ಕ್ರಮವಹಿಸುವುದಾಗಿ ಸಚಿವರು ತಿಳಿಸಿದರು.