ಕೊಪ್ಪಳ ತಾಲೂಕಿನ ಇಂದರಗಿತಾಂಡಾದಲ್ಲಿ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಬೋರ್​ವೆಲ್​ ಪರಿಶೀಲಿಸಿದರು. ತಾಪಂ ಇಒ ದುಂಡಪ್ಪ ತುರಾದಿ, ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಅಭಿಯಂತರರಾದ ವಿಲಾಸ್​ ಬೋಸ್ಲೆ, ಲಕ್ಷಿ$್ಮ ರಡ್ಡಿ ಇದ್ದರು. 
ಜಿಲ್ಲೆ

ಕುಡಿವ ನೀರು ಪರಿಸ್ಥಿತಿ ಅವಲೋಕನ, ವಿವಿಧ ಗ್ರಾಮಗಳಿಗೆ ಜಿಪಂ ಸಿಇಒ ಭೇಟಿ

ಕೊಪ್ಪಳ: ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕುಡಿವ ನೀರು ಸರಬರಾಜು ಪರಿಶೀಲಿಸಿದರು. ಬೇಸಿಗೆ ಕಳೆವವರೆಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಇಂದರಗಿ ತಾಂಡಾಕ್ಕೆ ಭೇಟಿ ನೀಡಿ ಅಲ್ಲಿನ ಮೂರು ಬೋರವೆಲ್​ಗಳನ್ನು ಪರಿಶೀಲಿಸಿದರು. ಗ್ರಾಮದಿಂದ 5 ಕಿಮೀ ದೂರದಲ್ಲಿ ಹೊಸ ಬೋರವೆಲ್​ ಕೊರೆಸಿದ್ದು, ಅಲ್ಲಿಂದ ಗ್ರಾಮಕ್ಕೆ ನೀರು ಪೂರೈಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮಸ್ಥರ ಕೋರಿಕೆಯಂತೆ 1 ಕಿಮಿ ದೂರದಲ್ಲಿರುವ ಖಾಸಗಿ ಬೋರವೆಲ್​ ಮೂಲಕ ಗ್ರಾಮಕ್ಕೆ ನೀರು ಪೂರೈಸಲು ಸ್ಥಳದಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕುಡಿವ ನೀರಿಗೆ ತೊಂದರೆಯಾದಲ್ಲಿ ಟ್ಯಾಂಕರ್​ ನೀರು ಪೂರೈಸಲು ಸೂಚಿಸಿದರು.

ನಂತರ ಹೊಸ ಬಂಡಿಹರ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಕುಡಿವ ನೀರು ಪರೀಸಲು ತಿಳಿಸಿದರು. ಗ್ರಾಮದ ಶಾಲಾ ಆವರಣದಲ್ಲಿನ ಬೋರವೆಲ್​ಗೆ ಕ್ರಷಿಂಗ್​ ಮಾಡಿ. ಬೋರ್​ವೆಲ್​ ನೀರು ಕಡಿಮೆ ಆದಲ್ಲಿ ಹೊಸ ಖಾಸಗಿ ಬೋರ್​ವೆಲ್​ ಗುರುತಿಸಲು ಹೇಳಿದರು. ಯಾವುದೇ ಗ್ರಾಮದಲ್ಲಿ ಕುಡಿವ ನೀರಿಗೆ ತೊಂದರೆಯಾಗಬಾರದು. ಕಾಲಕಾಲಕ್ಕೆ ನೀರು ಪರೀೆ ಮಾಡಿ. ಸಮಸ್ಯೆ ಗಂಭೀರ ಆಗುವವರೆಗೆ ವಿಳಂಬ ಮಾಡದೇ ಮುಂಜಾಗ್ರತ ಕ್ರಮ ಜರುಗಿಸಿ ಎಂದು ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಲ್ಲಿಂದ ಮುನಿರಾಬಾದ್​ ಡ್ಯಾಂ ಗ್ರಾಪಂ ವ್ಯಾಪ್ತಿಯಲ್ಲಿನ ಬಹು ಗ್ರಾಮ ಕುಡಿವ ನೀರಿನ ಕಾಮಗಾರಿ ಪರಿಶೀಲಿಸಿದರು. ಇಂದಿರಾನಗರ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೊಠಡಿ, ಶೌಚಗೃಹ ಕಾಮಗಾರಿ ವೀಸಿದರು. ಜಬ್ಬಲಗುಡ್ಡ ಗ್ರಾಮಕ್ಕೆ ತೆರಳಿ ಶಾಲಾ ಶೌಚಗೃಹ ನಿರ್ಮಾಣಕ್ಕೆ ಜಾಗ ಪರಿಶೀಲಿಸಿದರು. ಕುಡಿವ ನೀರು ಸರಬರಾಜು ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ತಾಪಂ ಇಒ ದುಂಡಪ್ಪ ತುರಾದಿ, ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಅಭಿಯಂತರರಾದ ವಿಲಾಸ್​ ಬೋಸ್ಲೆ, ಲಕ್ಷಿ$್ಮ ರಡ್ಡಿ, ಪಿಡಿಒಗಳಾದ ಮಹೇಶ್​ ಸಜ್ಜನ, ನಾಗರಾಜ, ಬೂದಗುಂಪಾ ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಗುತ್ತೂರು, ರೈತ ಮುಖಂಡರಾದ ಶ್ರೀನಿವಾಸ ಭೋವಿ, ದೇವಪ್ಪ ಹಲಗೇರಿ ಇತರರಿದ್ದರು.