ಜಿಲ್ಲೆ

ಪ್ಲೋರೈಯ್ಡ್​ ನೀರಿನ ಮೂಲ ಪರೀಸಲು ಸಿಇಒ ಸೂಚನೆ

ಕೊಪ್ಪಳ: ರಾಷ್ಟ್ರೀಯ ಫ್ಲೋರೋಸಿಸ್​ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಫ್ಲೋರೈಡ್​ ಅಂಶ ಹೆಚ್ಚಿರುವ ಗ್ರಾಮಗಳ ನೀರಿನ ಮೂಲ ಪರೀಸಿ ಎಂದು ಜಿಪಂ ಸಿಇಒ ವರ್ಣಿತ್​ ನೇಗಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ತಾಲೂಕುವಾರು ಮಾಹಿತಿ ಸಂಗ್ರಹಿಸಿ. ಶಾಲೆ, ಅಂಗವನಾಡಿ ಮಕ್ಕಳಿಗೆ ಕಡ್ಡಾಯವಾಗಿ ಆರ್​ಒ ನೀರು ನೀಡಿ. ಎಲ್ಲ ಬೋರ್​ವೆಲ್​ ನೀರು ಪರೀೆ ಮಾಡಿ. ್ಲೋರೈಡ್​ ನೀರಿನಿಂದ ದಂತಕ್ಷಯ, ಮೂಳೆಗಳ ದುರ್ಬಲತೆ ಆಗಲಿದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸಿ. ಶುದ್ಧ ಕುಡಿವ ನೀರು ಟಕಗಳಿಂದ ನೀರು ಪೂರೈಸಿ ಎಂದು ನಿರ್ದೇಶಿಸಿದರು.

ಮಗು ಜನಿಸಿದ 24 ಗಂಟೆಯೊಳಗೆ ಹಾಕಬೇಕಾದ ಕಡ್ಡಾಯ ಲಸಿಕೆ, ಬೆಳವಣಿಗೆ ಹಂತದಲ್ಲಿ ಹಾಕುವ ಲಸಿಕೆಗಳ ಬಗ್ಗೆ ಮಾಹಿತಿ ನೀಡಿ. ಹಾಕಿಸದಿದ್ದರೆ ಆಗುವ ಪರಿಣಾಮಗಳ ಬಗ್ಗೆ ತಾಯಂದಿರಿಗೆ ತಿಳಿಸಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಇಲಾಖೆ ಅಧಿಕಾರಿಗಳು ಕೈ ಜೋಡಿಸುವಂತೆ ತಿಳಿಸಿದರು.

ಡಿಎಚ್​ಒ ಡಾ.ಟಿ.ಲಿಂಗರಾಜು ಮಾತನಾಡಿ, ಕುಡಿವ ನೀರು, ಆಹಾರ, ಔಷಧ ಸೇವನೆ, ಕಾರ್ಖಾನೆ ಧೂಳು ಇನ್ನಿತರ ಕಾರಣಗಳಿಂದ ್ಲೋರೈಡ್​ ದೇಹ ಪ್ರವೇಶಿಸುತ್ತದೆ. ವಯಸ್ಸಿನ ಅಂತರ, ಲಿಂಗಬೇಧವಿಲ್ಲದೇ ಎಲ್ಲ ವಯೋಮಾನದವರಲ್ಲಿ ಕಂಡುಬರುತ್ತದೆ. ದಂತ, ಮೂಳೆ ಫ್ಲೋರೋಸಿಸ್​ ಹಾಗೂ ದೇಹದ ಇತರೆ ಭಾಗದ ಫ್ಲೋರೋಸಿಸ್​ ಎಂದು ಮೂರು ವಿಧಗಳಿವೆ. ಅಂತರ್ಜಲ, ಹಾಲಿಲ್ಲದ ಕಪ್ಪು ಟೀ, ಕಪ್ಪು ಕಲ್ಲುಪ್ಪು, ಅಡಿಕೆ, ತಂಬಾಕು ಸೇವನೆ, ಡಬ್ಬದಲ್ಲಿನ ತಿಂಡಿ ತಿನಿಸುಗಳು, ಔಷಧಿ, ಸೋಡಿಯಂ ಫ್ಲೋರೈಡ್​ ಮಾತ್ರೆ, ಮಂಪರು ಔಷಧಗಳು, ಆಹಾರದಲ್ಲಿ ಫ್ಲೋರೈಡ್​ ಅಂಶ ಹೆಚ್ಚಾಗಿದ್ದರೆ, ಸಮತೋಲನ ಆಹಾರ ಸೇವಿಸದಿದ್ದರೆ ಫ್ಲೋರೋಸಿಸ್​ ಕಾಯಿಲೆ ಬರುತ್ತದೆ ಎಂದು ಮಾಹಿತಿ ನೀಡಿದರು.

ಡಾ.ಪ್ರಕಾಶ ವಿ., ಡಾ.ರವೀಂದ್ರನಾಥ ಎಂ.ಎಚ್​., ಡಾ.ಶ್ರೀಧರ, ಡಾ.ನಂದಕುಮಾರ, ಡಾ.ಗೋನಾಳ ಕುಮಾರಸ್ವಾಮಿ, ಡಾ.ಶಶಿಧರ, ಡಾ.ಪ್ರಕಾಶ ಎಚ್​., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಇತರರಿದ್ದರು.