ಜಿಲ್ಲೆ

ಮೀನು ಮರಿ ಉತ್ಪಾದನೆಗೆ ಯೋಜನೆ ರೂಪಿಸಿ

ಕೊಪ್ಪಳ: ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರ ಅಭಿವೃದ್ದಿಪಡಿಸಲು ಸಮಗ್ರ ಯೋಜನೆ ರೂಪಿಸುವಂತೆ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮೀನುಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಶಿವಪುರ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.

ಕೇಂದ್ರಕ್ಕೆ ಅವಶ್ಯವಿರುವ ಕಾಮಗಾರಿಗಳ ಪಟ್ಟಿ ಸಿದ್ದಪಡಿಸಿ. ಜಿಪಂ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಡಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರಚಿಸಿ. ಅನುದಾನ ಒದಗಿಸಿ ಅಭಿವೃದ್ಧಿಪಡಿಸಲಾಗುವುದು. ಆಗಬೆಕಾದ ಕಾಮಗಾರಿಗಳ ಕ್ರಿಯಾಯೋಜನೆ ರಚಿಸಿ ಆಯುಕ್ತರಿಂದ ಅನುಮೋದನೆ ಪಡೆಯಿರಿ. ಮುಂದಿನ ಎರಡು ವರ್ಷದಲ್ಲಿ ಮಾದರಿ ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರವನ್ನಾಗಿ ರಚಿಸಲಾಗುವುದು. ಈ ಭಾಗದ ದೊಡ್ಡ ಮೀನು ಮರಿ ಉತ್ಪಾದನಾ ಕೇಂದ್ರ ಇದಾಗಿದ್ದು, ರಾಜ್ಯಕ್ಕೆ ಮಾದರಿ ಕೇಂದ್ರವಾಗಿ ಬದಲಾವಣೆ ಮಾಡಬೇಕಿದೆ ಎಂದು ಸೂಚಿಸಿದರು.

ುನುಗಾರಿಕೆ ಇಲಾಖೆ ಉಪನಿರ್ದೇಶಕಿ ಭಾಗ್ಯಶ್ರೀ, ತಾಪಂ ಇಒ ದುಂಡಪ್ಪ ತುರಾದಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಜನೀಶ್​, ಸಿಬ್ಬಂದಿ ಬಸವರಾಜ, ಗ್ರಾಪಂ ಅಧ್ಯಕ್ಷ ರವಿಕುಮಾರ ಚೆಲಸಾನಿ, ಉಪಾಧ್ಯಕ್ಷ ವೆಂಕಟೇಶ ಚನ್ನದಾಸರ, ಸದಸ್ಯರಾದ ಶೇಷನಗೌಡ, ಪಿಡಿಒ ಮಂಜುಳಾ ಪಾಟೀಲ್​, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಕರವಸೂಲಿಗಾರ ಮಂಜುನಾಥ ಇದ್ದರು.

ಹಣ್ಣು ಮೇಳಕ್ಕೆ ಭೇಟಿ : ಕೊಪ್ಪಳದ ತೋಟಗಾರಿಕೆ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿರುವ ಹಣ್ಣುಗಳ ಮೇಳಕ್ಕೆ ಸಿಇಒ ಭೇಟಿ ನೀಡಿ ವೀಸಿದರು. ವಿವಿಧ ಹಣ್ಣುಗಳ ಪ್ರದರ್ಶನ, ಮಾರಾಟ ಬಗ್ಗೆ ಮಾಹಿತಿ ಪಡೆದರು. ಉಪನಿರ್ದೇಶಕ ಕೃಷ್ಣ ಉಕ್ಕುಂದ ಮೇಳ ಬಗ್ಗೆ ವಿವರಿಸಿದರು.