ಕೊಪ್ಪಳ: ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯ ಸುತ್ತ ಸ್ವಚ್ಛತೆ ಕಾಪಾಡಿ. ಗ್ರಾಮದಲ್ಲಿನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಪರಿಹರಿಸಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಹುಲಿಗಿ ಗ್ರಾಮದಲ್ಲಿ ಗ್ರಾಪಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿದರು.
ನರೇಗಾ ಕಾಮಗಾರಿಯಡಿ ಕೆಲಸ ಮಾಡದವರಿಗೆ ಕೂಲಿ ನೀಡಿ. ವೈಯಕ್ತಿಕ ಕಾಮಗಾರಿಯಡಿ ಅನುದಾನ ಬಿಡುಗಡೆಯಾದ ತಕ್ಷಣ ಪಾವತಿಸಿ. ಚಾಲ್ತಿ ಕಾಮಗಾರಿ ಬೇಗ ಮುಗಿಸಿ. ಕೆಲಸ ಅರಸಿ ಬಂದವರಿಗೆ ನಿರಾಕರಿಸಬೇಡಿ. ವಸತಿ ಯೋಜನೆಯಡಿ ಮಂಜೂರಾದ ಮನೆಗಳು ಪೂರ್ಣಗೊಳ್ಳದಿದ್ದರೆ ನೋಟಿಸ್ ನೀಡಿ. ಹುಲಿಗೆಮ್ಮ ದೇವಾಲಯ ಪರಿಸರ ಸ್ವಚ್ಛವಾಗಿರಲಿ. ಜೆಜೆಎಂ ಕಾಮಗಾರಿ ಪೂರ್ಣಗೊಳಿಸುವಂತೆ ಸಿಇಒ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಂಡ ಚಿನ್ನಮ್ಮ ಚಂದ್ರಪ್ಪ ಕಾಯಗಡ್ಡಿ ಮನೆಗೆ ಭೇಟಿ ನೀಡಿ ವೀಸಿದರು. ಸಹಾಯಧನ ಬಂದ ಬಗ್ಗೆ ಕೇಳಿ ತಿಳಿದರು. ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡು ಬಳಕೆ ಮಾಡುವಂತೆ ತಿಳಿಸಿದರು. ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದರು. ಪಾಠಗಳು, ಪಠ್ಯೇತರ ಚಟುವಟಿಕೆ, ಬಿಸಿಯೂಟ ಗುಣಮಟ್ಟ ಬಗ್ಗೆ ಮಕ್ಕಳಿಂದ ಕೇಳಿ ತಿಳಿದರು.
ತಾಪಂ ಇಒ ದುಂಡಪ್ಪ ತುರಾದಿ, ಸಹಾಯಕ ನಿರ್ದೇಶಕರಾದ ಮಹೇಶ ಎಚ್., ಯಂಕಪ್ಪ, ಎಇಇ ವಿಲಾಸ್ ಬೋಸ್ಲೆ, ಬಿಇಒ ಶಂಕ್ರಯ್ಯ ಟಿ.ಎಸ್., ಸಿಡಿಪಿಒ ಜಯಶ್ರೀ, ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದ್ಾ, ಹುಲಿಗಿ ದೇವಾಲಯ ಇಒ ಅರವಿಂದ ಸುತಗುಂಡಿ, ಗ್ರಾಪಂ ಅಧ್ಯೆ ನೀಲಮ್ಮ ಗುಂಗಾಡಿ, ಉಪಾಧ್ಯಕ್ಷ ಸೈಯದ್ ನ್ಯಾಮತ್ ಅಲಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.