ಜಿಲ್ಲೆ

ಫಲಾನುಭವಿಗಳಿಗೆ ಸಹಾಯಧನ ಪಾವತಿಸಿ

ಕೊಪ್ಪಳ: ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಹಾಯಧನ ದೊರೆಯುವಂತೆ ನೋಡಿಕೊಳ್ಳಲು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಗೊಂಡಬಾಳ ಗ್ರಾಪಂಗೆ ಗುರುವಾರ ಭೇಟಿ ನೀಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಮಾತನಾಡಿದರು.

ಗ್ರಾಮ ಪಂಚಾಯಿತಿಯಿಂದ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಹಂತವಾರು ಸಹಾಯಧನ ಫಲಾನುಭವಿಗೆ ದೊರಕುವಂತೆ ನೋಡಿಕೊಳ್ಳಿ. ಈಗಾಗಲೇ ಕಾಯ್ದಿರಿಸಿದ ಪಟ್ಟಿಯಲ್ಲಿದ್ದವರನ್ನು ಆಯ್ಕೆ ಮಾಡಿ. ಮನೆ ಮಂಜೂರು ಮಾಡಿ. ಯಾವುದೇ ಕಾರಣಕ್ಕೂ ಅರ್ಹರು ಯೋಜನೆಯಿಂದ ವಂಚಿತರಾಗಬಾರದು. ಗ್ರಾಪಂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ. ವಸತಿ ರಹಿತರು, ವಸತಿ ಇರುವವರು ಎಂದು ಪಟ್ಟಿ ರಚಿಸಿ. ಇದರಿಂದ ಆಯ್ಕೆ ಸುಲಭವಾಗಲಿದೆ ಎಂದರು.

ಸಂಜೀವಿನಿ ಒಕ್ಕೂಟ ಸದಸ್ಯರು ಪ್ರತಿ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುತ್ತಾರೆ. ಅವರಿಗೆರ ಶುಲ್ಕ ನೀಡಬೇಕು. ಎಲ್ಲ ಜನರು ತ್ಯಾಜ್ಯ ಸಂಗ್ರಹಣೆ ಶುಲ್ಕ ಪಾವತಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸಿ. ನಿತ್ಯ ಕಸ ವಿಲೇವಾರಿ ಆಗಬೇಕು. ಇದರಿಂದ ನಮ್ಮ ಗ್ರಾಮ ಸ್ವಚ್ಛವಾಗಿರಲಿದೆ. ಪ್ರತಿ ಮನೆಗೆ ತಿಂಗಳಿಗೆ 30ರೂ. ಹಾಗೂ ಹೋಟೆಲ್​ಗಳಿಗೆ 50ರೂ. ಶುಲ್ಕ ನಿಗದಿಯಾಗಿದೆ. ಎಲ್ಲರೂ ಶುಲ್ಕ ವಸೂಲಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಳಿಕ ಕೂಸಿನ ಮನೆಗೆ ಭೇಟಿ ನೀಡಿದ ಸಿಇಒ, ಮಕ್ಕಳ ದಾಖಲಾತಿ ಪರಿಶೀಲಿಸಿದರು. ಕೇರ್​ ಟೇಕರ್ಸ್​ ನಿತ್ಯ 29 ಮಕ್ಕಳು ಕೂಸಿನ ಮನೆಗೆ ಬರುತ್ತಿದ್ದಾರೆ. ಬೆಳಗ್ಗೆ ಹಾಲು, ಬಾಳೆಹಣ್ಣು, ದಾಲ್​ ಕಿಚಡಿ, ಹೆಸರು ಬೆಳೆ ಪಾಯಸ, ಶಾವಿಗೆ ಪಾಯಸ, ಮೊಟ್ಟೆ ನೀಡುತ್ತಿದ್ದೇವೆಂದು ಮಾಹಿತಿ ನೀಡಿದರು. ಕೇರ್​ ಟೇಕರ್​ಗಳಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಪಾವತಿಸಲು ಸಿಇಒ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ತಾಪಂ ಸಹಾಯಕ ನಿರ್ದೇಶಕ ಮಹೇಶ ಎಚ್​., ಪಿಡಿಒ ಜಯಲಕ್ಷಿ$್ಮ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಪಂ ಸದಸ್ಯ ಕೊಟ್ರೇಶ, ಕಾರ್ಯದರ್ಶಿ ಗವಿಸಿದ್ದಯ್ಯ ಇರತರರಿದ್ದರು.