BASAVARAJ RAYARADDI  
ಜಿಲ್ಲೆ

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ:ರಾಯರಡ್ಡಿ

district koppal yalaburga mla basavaraj arayaraddi says lingayata must be religion

ಯಲಬುರ್ಗಾ (ಕೊಪ್ಪಳ): ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ ಎಂಬ ವಾದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಬೇವೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಾತಿಗಣತಿ ವಿರೋಧಿಸುವ ಮೊದಲು ಬಿಡುಗಡೆಯಾಗಲಿ. ಅದರಲ್ಲಿ ಏನಿದೆ ಎಂದು ತಿಳಿಯಲಿ. ಸಾಮಾಜಿಕ ಸ್ಥಿತಿ&ಗತಿ ಅರಿಯಲು ಗಣತಿ ನಡೆಸಲಾಗಿದೆ. ಅದರಲ್ಲಿ ಜಾತಿ ಒಂದು ಅಂಶ ಅಷ್ಟೆ. ಸರಿ ಇಲ್ಲದಿದ್ದರೆ ಮತ್ತೊಮ್ಮೆ ಮಾಡಿಸಬಹುದು.

ಜನ ಜಾತಿ, ಹಣ ನೋಡಿ ಮತ ಹಾಕುವುದಿಲ್ಲ. ನಾವು ಜಾತಿ, ಹಣದ ಮೇಲೆ ಚುನಾವಣೆ ಮಾಡುತ್ತೇವೆ. ಗಣತಿ ವೇಳೆ ಉಪ ಪಂಗಡಗಳ ಹೆಸರು ಬರೆಸಿರುವುದರಿಂದ ಲಿಂಗಾಯತರು ಹಾಗೂ ಒಕ್ಕಲಿಗರಲ್ಲಿ ಆತಂಕ ಇದೆ ಎಂದರು.

2004ರಿಂದ ಚುನಾವಣೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಗುತ್ತಿಗೆದಾರರು, ರಿಯಲ್​ ಎಸ್ಟೇಟ್​ನವರು ರಾಜಕೀಯಕ್ಕೆ ಬಂದಿದ್ದಾರೆ. ಸಂವಿಧಾನದಲ್ಲಿ ದಂಧೆ ಮಾಡುವವರು ರಾಜಕೀಯಕ್ಕೆ ಬರಬಾರದು ಎಂದಿದೆ.

ವಾಮಮಾರ್ಗದಿಂದ ರಾಜಕೀಯಕ್ಕೆ ಬರುತ್ತಾರೆ. ಅಲ್ಲದೇ ಕುಟುಂಬ ರಾಜಕಾರಣ ಹೆಚ್ಚಿದೆ. ಗುತ್ತಿಗೆದಾರರೇ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿದ್ದಾರೆ. ಇದರಿಂದ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ ಎಂದು ಬೇಸರಿಸಿರು.