ಜಿಲ್ಲೆ

ಖಾಲಿ ಸೀಟು ಭರ್ತಿಗೆ ಕೌನ್ಸಲಿಂಗ್​

ಕೊಪ್ಪಳ: ಯಲಬುರ್ಗಾ ತಾಲೂಕಿನ ಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳ ಭರ್ತಿಗೆ ಕೌನ್ಸಲಿಂಗ್​ ಮೂಲಕ ದಾಖಲಾತಿ ಮಾಡಲಾಗುವುದೆಂದು ಬಿಇಒ ತಿಳಿಸಿದ್ದಾರೆ.

42 ಸ್ಥಾನಗಳು ಉಳಿದಿವೆ. 1:30 ಅನುಪಾತದಂತೆ ಮೀಸಲಾತಿವಾರು ಅರ್ಹ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುವುದು. ಆ.11 ಮತ್ತು 12 ರಂದು ಸಾಮಾನ್ಯ, ಪ್ರವರ್ಗ-1 ಹಾಗೂ ಪ್ರವರ್ಗ-3ಬಿ ಅಭ್ಯರ್ಥಿಗಳಿಗೆ ಮತ್ತು ಆ.13 ಮತ್ತು 14 ರಂದು ಎಸ್​.ಸಿ, ಎಸ್​.ಟಿ, ಪ್ರವರ್ಗ-2ಎ ಹಾಗೂ ಪ್ರವರ್ಗ-2ಬಿ ಅಭ್ಯರ್ಥಿಗಳಿಗೆ ಕೌನ್ಸಲಿಂಗ್​ ನಡೆಸಲಾಗುವುದು. ಕೌನ್ಸಲಿಂಗ್​ ಪಟ್ಟಿಯಲ್ಲಿರುವ ಮಕ್ಕಳು ದಾಖಲಾತಿಯೊಂದಿಗೆ ಹಾಜರಾಗುವಂತೆ ತಿಳಿಸಿದ್ದಾರೆ.