ಜಿಲ್ಲೆ

ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಆಹ್ವಾನ

ಕೊಪ್ಪಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷಿನ್​ ಶಕ್ತಿ ಯೋಜನೆಯಡಿ ಸಖಿ ಒನ್​ ಸ್ಟಾಪ್​ ಸೆಂಟರ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ.

ಸಖಿ ಒನ್​ ಸ್ಟಾಪ್​ ಸೆಂಟರ್​ನಲ್ಲಿ ಖಾಲಿ ಇರುವ ಕೇಸ್​ ವರ್ಕರ್​/ಸೋಶಿಯಲ್​ ವರ್ಕರ್​ ಒಂದು ಹುದ್ದೆ ಮತ್ತು ಪ್ಯಾರಾ ಲೀಗಲ್​ ಪರ್ಸನಲ್​ ಲಾಯರ್​ ಒಂದು ಸೇರಿ ಈ ಎರಡೂ ಹುದ್ದೆಗಳ ಸಾಮಾನ್ಯ ಅರ್ಹತಾ ಪಟ್ಟಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಗಳು ಮತ್ತು ಅನರ್ಹ ಪಟ್ಟಿಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಸೂಚನಾ ಫಲಕಕ್ಕೆ ಲಗತ್ತಿಸಲಾಗಿದೆ.

ಈ ಆಯ್ಕೆ ಪಟ್ಟಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ರಜೆ ದಿನಗಳನ್ನು ಹೊರತುಪಡಿಸಿ ಫೆಬ್ರವರಿ 7 ರವರೆಗೆ ಅಭ್ಯರ್ಥಿಗಳು ಲಿಖಿತ ರೂಪದಲ್ಲಿ ಕಛೇರಿಯ ಸಮಯದಲ್ಲಿ ಸಲ್ಲಿಸಬೇಕು. ನಂತರ ಬಂದಂತಹ ಆಕ್ಷೇಪಣೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.