ಜಿಲ್ಲೆ

ದೌರ್ಜನ್ಯದ ವಿರುದ್ಧ ಮಹಿಳೆಯರು ನಿಲ್ಲಲಿ-ಡಬ್ಲೂಐಎಂ ರಾಷ್ಟ್ರೀಯ ನಾಯಕಿ ಪ್ರೊ.ಸೈಯದಾ ಸಾದಿಯ ಸಲಹೆ

Kopala - Raveendra V K

ಕೊಪ್ಪಳ: ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆಗಳನ್ನು ಖಂಡಿಸಿ ಒಳ್ಳೆಯ ಸಮಾಜ ಕಟ್ಟಲು ಮಹಿಳೆಯರು ಟೊಂಕ ಕಟ್ಟಿ ನಿಲ್ಲಬೇಕಿದೆ ಎಂದು ಡಬ್ಲೂಐಎಂ ರಾಷ್ಟ್ರೀಯ ನಾಯಕಿ ಪ್ರೊ.ಸೈಯದಾ ಸಾದಿಯ ಹೇಳಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ವಿಮೆನ್​ ಇಂಡಿಯಾ ಮೂವ್​ಮೆಂಟ್​ (ಡಬ್ಲೂಐಎಂ) ಸದಸ್ಯತ್ವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ದಮನಿತರ ಧ್ವನಿಯಾಗಿ ದೇಶದ ರಾಜಕೀಯದಲ್ಲಿ ಭಾಗವಹಿಸಬೇಕಿದೆ. ಹೋರಾಟ, ಪ್ರತಿಭಟನೆಗಳಿಂದ ತಮ್ಮ ಹಕ್ಕು ಪಡೆಯಲು ಸಾಧ್ಯ ಎಂದರು.

ದೇಶದಲ್ಲಿ ಹಿಜಾಬ್​, 2&ಬಿ ಮೀಸಲಾತಿ, ಜಾತಿ ಗಣತಿ, ಎನ್​ಆರ್​ಸಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಜೆಎನ್​ಯು ವಿದ್ಯಾರ್ಥಿಗಳು ಜೈಲಿನಲ್ಲಿದ್ದಾರೆ. ಅವರಿಗೆ ನ್ಯಾಯ ಕೊಡಿಸುವವರು ಯಾರು ? ಕಾಂಗ್ರೆಸ್​ ಹಾಗೂ ಸೆಕ್ಯುಲರ್​ ಪಕ್ಷಗಳು ಮಾತಾನಾಡುತ್ತಿಲ್ಲ ಯಾಕೆ ?ಹಲವಾರು ನಾಯಕರು ಜೈಲಿನಲ್ಲಿದ್ದು, ಅವರ ಬಗ್ಗೆ ಮಾತನಾಡುವವರು ಯಾರು ? ದಲಿತರು, ಹಿಂದುಳಿದವರು, ರೈತರಿಗೆ ಕೇಂದ್ರದ ಬಿಜೆಪಿ ಆಡಳಿತ ಮಾರಕವಾಗಿದೆ. ದಿನನಿತ್ಯ ಮಹಿಳೆಯರ ಮೇಲೆ ದೌರ್ಜನ್ಯ, ರೇಪ್​, ಕೊಲೆಗಳನ್ನು ಮಾಡುವವರ ಮೇಲೆ ಕಠಿಣ ಕಾನೂನು ರೂಪಿಸುವಲ್ಲಿ ಹಾಗೂ ಮಹಿಳೆಯರಿಗೆ ಸಂಪೂರ್ಣ ಸುರಕ್ಷತೆ ನೀಡುವಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಸರ್ಕಾರಗಳು ವಿಫಲವಾಗಿವೆ. ಆದ್ದರಿಂದ ಮಹಿಳೆಯರು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಬೇಕಾಗಿದೆ ಎಂದು ಹೇಳಿದರು.

ಡಬ್ಲೂಐಎಂ ಜಿಲ್ಲಾಧ್ಯಕ್ಷೆ ಸುಹಾನಾ ನಾಜ್​, ಪ್ರಮುಖರಾದ ಉಮ್ಮೆ ರುಮಾನ, ಸೈಯದ್​ ಸಲೀಂ ಖಾದ್ರಿ, ಶಾಕಿರ ಬೇಗಂ ಇತರರಿದ್ದರು.