ಸಾರಿಗೆ ಬಸ್​ ಟಿಕೆಟ್​ನಲ್ಲಿ ಮತದಾನ ಮಾಡುವ ಸಂದೇಶ ಪ್ರಕಟಿಸಿರುವುದು. 
ಜಿಲ್ಲೆ

ಬಸ್​ ಟಿಕೆಟ್​ನಲ್ಲೂ ಮತದಾನ ಜಾಗೃತಿ

Kopala - Raveendra V K

ಕೊಪ್ಪಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹತ್ತಾರು ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್​ ಟಿಕೆಟ್​ನಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ.

ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್​ ಸಮಿತಿ ಹಲವಾರು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಸಮಿತಿಯೊಂದಿಗೆ ಕೈಜೋಡಿಸಿರುವ ಕೆಕೆಆರ್​ಟಿಸಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವ ಟಿಕೆಟ್​ನಲ್ಲೂ ಮತದಾನದ ಸಂದೇಶ ನೀಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ.

ಮೇ 7ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಎಲ್ಲರೂ ತಮ್ಮ ಅಮೂಲ್ಯ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಬಲಪಡಿಸಬೇಕೆಂಬುದು ಚುನಾವಣಾ ಆಯೋಗದ ಆಶಯ. ವಿವಿಧ ಇಲಾಖೆಗಳು, ಗ್ರಾಪಂ, ತಾಪಂ, ನಗರ, ಸ್ಥಳಿಯ ಸಂಸ್ಥೆಗಳು ಮತದಾನ ಜಾಗೃತಿಯಲ್ಲಿ ಭಾಗಿಯಾಗಿವೆ.