ಜಿಲ್ಲೆ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಕ್ರಮ ಮಸೀದಿಗಳ ದ್ವಂಸ : ಯತ್ನಾಳ್​

ಕೊಪ್ಪಳ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಗಳನ್ನು ಬುಲ್ಡೋಜರ್​ ಹತ್ತಿಸಿ ದ್ವಂಸ ಮಾಡಿಸುವೆ ಎಂದು ವಿಜಯಪುರ ಶಾಸಕ ಬನಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

ಗಂಗಾವತಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಮಾತನಾಡಿದರು.

2028ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಪಕ್ಕಾ. ಈಗ ನನ್ನ ವಿರುದ್ಧ ನಿತ್ಯ ಒಂದೊಂದು ಊರಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸುವೆ. ತುಮಕೂರಿನಲ್ಲಿ ಪೊಲೀಸ್​ ದೂರು ನೀಡಿದ್ದಾನೆ. ಅವನನ್ನು ಕರೆದು ಯಾರು ಪ್ರಚೋದಿಸಿದರೆಂದು ಕೇಳುವೆ. ಪಕ್ಷದಿಂದ ಉಚ್ಛಾಟಿತರಾದವರೆಲ್ಲ ಸಿಎಂ ಆಗಿದ್ದಾರೆ. ನಾನೂ ಸಿಎಂ ಆಗುವೆ. ಈ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯಗೂ ಹೇಳಿರುವೆ. ಸಿದ್ದರಾಮಯ್ಯ, ಬಿಎಸ್​ವೈ, ಕುಮಾರಸ್ವಾಮಿ ಎಲ್ಲರೂ ಪಕ್ಷದಿಂದ ಉಚ್ಛಾಟಿತರಾಗಿದ್ದವರೇ. ಅವರೆಲ್ಲ ಸಿಎಂ ಆಗಿದ್ದಾರೆ ಎಂದು ಉದಾಹರಣೆ ನೀಡಿದರು.

ನಾನು ಬಿಜೆಪಿಗೆ ಬರುವುದಿಲ್ಲವೆಂದು ಅಂದುಕೊಂಡಿದ್ದಾರೆ. ನಮ್ಮ ಕೈಗೆ ಪಕ್ಷ ನೀಡಿದರೆ 150 ಸ್ಥಾನ ತಂದುಕೊಡುವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗಣಪತಿ ಕೂಡಿಸಲು ಪರವಾನಗಿ ಪಡೆವ ಅಗತ್ಯವಿಲ್ಲ. ಅಧಿಕಾರಿಗಳೇ ಪೆಂಡಾಲ್​, ವಿಭೂತಿ, ಕುಂಕುಮ ಹಿಡಿದು ನಿಮ್ಮ ಬಳಿ ಬರುತ್ತಾರೆ. ನಾನು ಸರ್ಕಾರದ ಪ್ರತಿನಿಧಿ. ಸಿಎಂ ನಿಮಗೆ 11 ಸಾವಿರ ದೇಣಗೆ ನೀಡಿದ್ದಾರೆ. ಡಿಜೆ ಯಾವಾಗ ಕೂಡಿಸುತ್ತೀರಿ ? ನಮ್ಮ ಪಿಎಸ್​ಐ ಸಾಹೇಬರು ಬಂದು ಉದ್ಘಾಟಿಸುವರು ಎಂದು ಕೇಳಿಕೊಳ್ಳುತ್ತಾರೆ. ನಾನು ಅಭಿವೃದ್ಧಿಗೆ ಬಂದವಾಗಿದ್ದು, ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡುವೆ. ನಾನು ಹಿಂದೆ ಒಂದು, ಮುಂದೆ ಒಂದು ಮಾತನಾಡುವುದಿಲ್ಲ.. ಏನಿದ್ದರೂ ಖುಲ್ಲಂ ಖುಲ್ಲ. ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ಟೋಪಿ ಹಾಕುವವರು ಯಾವತ್ತೂ ನಮಗೆ ಮತ ಹಾಕುವುದಿಲ್ಲ. ಸುಮ್ಮನೆ ಅವರ ಮನೆ ಮುಂದೆ ನಿಲ್ಲುವುದು ಬೇಡ. ಅವರು ಹೇಗೆ ಕಾಂಗ್ರೆಸ್​ ಪರವಾಗಿ ಒಗ್ಗಟ್ಟಾಗುತ್ತಾರೊ ಹಾಗೇ 2028ಕ್ಕೆ ಹಿಂದುಗಳೆಲ್ಲ ಒಂದಾಗೋಣ. ಆಗ ಗಣಪತಿ ಮೆರವಣಿಗೆ ಜತೆಗೆ ಹಿಂದೆ ಜೆಸಿಬಿ ಇರುತ್ತದೆ. ನಾವು ಮೊದಲೇ ಮಸೀದಿ ಲಿಸ್ಟ್​ ಮಾಡಿರುತ್ತೇವೆ. ಎಲ್ಲಿಯಾದರೂ ಮೆರಣಿಗೆಗೆ ಕಲ್ಲು ಬಿದ್ದರೆ ಜೆಸಿಬಿ ಚಾಲು ಮಾಡಿ ಬಿಸಿ ಮುಟ್ಟಿಸುತ್ತೇವೆ. ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ, ಪ್ಯಾಲಿಸ್ತೇನ್​ ಪರವಾಗಿ ಘೋಷಣೆ ಕೂಗುವ ತಾಯಂಗಡರಿಗೆ ಮುಂದೆ ಇದೆ.

ಸದನದಲ್ಲಿ ಪಾಕಿಸ್ತಾನ ಪರ ಮಾತನಾಡಲು ಸ್ಪೀಕರ್​ ಯುಟಿ ಖಾದರ್​ ನನಗೆ ಅನುಮತಿ ನೀಡಿ ಬೆಂಬಲಿಸಿದರು. ಆದರೆ ಬಸವರಾಜ ರಾಯರಡ್ಡಿ ಅಡ್ಡ ಬಂದು ಕೆಲ ಪದ ಬಳಸದಂತೆ ತಿಳಿಸಿದರು. ಹಿಂದುವಾಗಿ ದೇಶದ್ರೋಹಿಗಳ ಪರವಹಿಸುತ್ತಾರೆ. ಖಾದರ್​, ಅಬ್ದುಲ್​ ಕಲಾಂರಂಥ ದೇಶ ಭಕ್ತರನ್ನು ನಾವು ಗೌರವಿಸುತ್ತೇವೆ. ಆದರೆ ಪಾಕ್​ ಪರ ಇದ್ದವರನ್ನು ಸಹಿಸಲಾಗದು ಎಂದು ಕಿಡಿಕಾರಿದರು.