ಜಿಲ್ಲೆ

ವಾಲಿಬಾಲ್​ ಪಂದ್ಯದಲ್ಲಿ ಸಾಧನೆ

Kopala - Raveendra V K

ಕೊಪ್ಪಳ: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ 2024-&25ನೇ ಶಾಲಾ ಹಂತದ ರಾಷ್ಟ್ರಮಟ್ಟದ ವಾಲಿಬಾಲ್​ ಪಂದ್ಯದಲ್ಲಿ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.

ನ.6ರಿಂದ 10ವರೆಗೆ ನಡೆದ ಪಂದ್ಯದಲ್ಲಿ ಕೊಪ್ಪಳ ಕ್ರೀಡಾ ವಸತಿ ನಿಲಯದ ಮೋಹನ್​, ಶಶಾಂಕ, ವಿಜಯ ಹಾಗೂ ಕಾಸಿಂ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಜ್ಯಕ್ಕೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ. ಮಕ್ಕಳ ಸಾಧನೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಕ್ರೀಡಾ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ತಿಳಿಸಿದ್ದಾರೆ.