ಜಿಲ್ಲೆ

ಕಾಲೇಜುಗಳ ಸಂಯೋಜನೆಗೆ ಅರ್ಜಿ ಆಹ್ವಾನ

Kopala - Raveendra V K

ಕೊಪ್ಪಳ: 2025-26ನೇ ಶೈಕ್ಷಣಿಕ ಸಾಲಿಗೆ ಯುಯುಸಿಎಂಎಸ್​ ತಂತ್ರಾಂಶ ಮೂಲಕ ಕೊಪ್ಪಳ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಿಂದ ಸಂಯೋಜನಾ ಅರ್ಜಿ ಆಹ್ವಾನಿಸಿದೆ.

ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಇನ್ನಿತರ ಸಾಂಪ್ರದಾಯಿಕ ವಿಷಯಗಳಲ್ಲಿ ಹೊಸ ಪದವಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಇಚ್ಚಿಸುವ ಸಂಘ ಸಂಸ್ಥೆಗಳು/ಸಾರ್ವಜನಿಕ ಟ್ರಸ್ಟ್​ಗಳಿಂದ ಹೊಸ ಸಂಯೋಜನಾ ಅರ್ಜಿಗಳು ಹಾಗೂ ಪ್ರಸ್ತುತ ವಿಶ್ವವಿದ್ಯಾಲಯದಿಂದ ಸಂಯೋಜನೆ ಹೊಂದಿರುವ ಮಹಾವಿದ್ಯಾಲಯಗಳಿಂದ ಸ್ನಾತಕ/ಸ್ನಾತಕೋತ್ತರ ಕೋರ್ಸ್​ಗಳಿಗೆ ಮುಂದುವರಿಕೆ/ವಿಸ್ತರಣೆ/ಹೊಸ ಕೋರ್ಸ್​/ಹೊಸ ವಿಷಯ/ಪ್ರವೇಶ ಮಿತಿ ಹೆಚ್ಚಳ/ಶಾಶ್ವತ ಸಂಯೋಜನೆ/ಶಾಶ್ವತ ಸಂಯೋಜನೆ ನವೀಕರಣ/ಮಹಾವಿದ್ಯಾಲಯಗಳ ಹೆಸರು ಬದಲಾವಣೆ/ಮಹಾವಿದ್ಯಾಲಯ ಸ್ಥಳಾಂತರ/ಆಡಳಿತ ಮಂಡಳಿ ಬದಲಾವಣೆ ದಾಖಲೆಗಳೊಂದಿಗೆ ನಿಗದಿತ ಸಂಯೋಜನಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಅ.25ರಿಂದ ನ.10ವರೆಗೆ ಹಾಗೂ ನ.11ರಿಂದ ನ.15ವರೆಗೆ ದಂಡ ಸಹಿತ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ವಿವಿ ಜಾಲತಾಣ www.koppaluniversity.ac.in 9448687862ಕ್ಕೆ ಸಂಪರ್ಕಿಸಲು ಕುಲ ಸಚಿವರು ತಿಳಿಸಿದ್ದಾರೆ.