ಕೊಪ್ಪಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಿಂದ ಡಿಸೆಂಬರ್ ತಿಂಗಳಲ್ಲಿ ಜೆ.ಸಿ.ಬಿ ಚಾಲನಾ ತರಬೇತಿ ಮತ್ತು ಜನೆವರಿ ತಿಂಗಳಲ್ಲಿ ಟ್ರಾವೆಲ್ ಮತ್ತು ಟೂರಿಸ್ಟ ಗೈಡ್ ಹಾಗೂ ಫೆಬ್ರವರಿ ತಿಂಗಳಲ್ಲಿ ಮೊಬೈಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ಉಚಿತ ತರಬೇತಿ ನೀಡುತ್ತಿದ್ದು, ಆಸಕ್ತ ಗ್ರಾಮೀಣ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದು.
ತರಬೇತಿ ಉಚಿತ ಊಟ, ವಸತಿಯೊಂದಿಗೆ ಇರಲಿದೆ. ಆಸಕ್ತರು ನ.30ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ, ಆರ್ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಅಥವಾ ಮೊ.ಸಂ: 821736973, 9483485489, 9482188780 ಗೆ ಸಂಪರ್ಕಿಸುವಂತೆ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.