ಜಿಲ್ಲೆ

ತರಬೇತಿಗೆ ಅರ್ಜಿ ಆಹ್ವಾನ

Kopala - Raveendra V K

ಕೊಪ್ಪಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್​ ದೇಶಪಾಂಡೆ ಆರ್​ಸೆಟಿ ಸಂಸ್ಥೆಯಿದ ರೆಫ್ರಿಜರೇಷನ್​ ಮತ್ತು ಏರ್​ ಕಂಡೀಶನಿಂಗ್​ ಉಚಿತ ತರಬೇತಿಗೆ ಆಸಕ್ತಿರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೇ 26ರಿಂದ 30 ದಿನಗಳ ತರಬೇತಿ ಇರಲಿದೆ. ಮೊದಲು ಬಂದವರಿಗೆ ಆದ್ಯತೆ. ತರಬೇತಿಯಲ್ಲಿ ಕೌಶಲ, ಸಾಫ್ಟ್​ ಸ್ಕಿಲ್ಸ್​, ಯೋಗ ತರಬೇತಿ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರ್ಕಾರಿ ಯೋಜನೆಗಳ ಮತ್ತು ಯೋಜನಾ ವರದಿ ತಯಾರಿಕೆ ಮಾಹಿತಿ ನೀಡಲಾಗುವುದು. ಹೆಸರು ನೋಂದಣಿಗೆ ಮೇ 20 ಕೊನೆಯ ದಿನ. ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್​ ದೇಶಪಾಂಡೆ, ಆರ್​ಸೆಟ್​ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಅಥವಾ ಮೊ.ಸಂ: 9980510717, 9483485489ಗೆ ಸಂಪರ್ಕಿಸಲು ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.