ಜಿಲ್ಲೆ

ಗರ್ಭ ಧರಿಸಿದ ಅಪ್ರಾಪ್ತಳು

ಕೊಪ್ಪಳ: ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತಳು ಗರ್ಭಿಣಿಯಾಗಿದ್ದು ಜಗ್ಗೇಶ ರಾಠೋಡ್​ ಎಂಬಾತನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.

ಆರೋಪಿ ಹಾಗೂ ಬಾಲಕಿ ಒಂದೇ ಸಮುದಾಯದವರಾಗಿದ್ದು ಎರಡು ವರ್ಷದಿಂದ ಪ್ರೀತಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಸಂಭೋಗ ಮಾಡಿದ್ದಾನೆ. ಇದರಿಂದ ಬಾಲಕಿ ಗರ್ಭಧರಿಸಿದ್ದಾಳೆ. ಮಾಹಿತಿ ಪಡೆದ ಮಕ್ಕಳ ರಕ್ಷಣಾಧಿಕಾರಿಗಳು ಬಾಲಕಿಯನ್ನು ಬಾಲಮಂದಿರಕ್ಕೆ ದಾಖಲಿಸಿದ್ದಾರೆ. ಮುನಿರಾಬಾದ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.