ಜಿಲ್ಲೆ

ಆನ್​ಲೈನ್​ ಮೋಸಕ್ಕೊಳಗಾದ ಟೀಚರ್​

ಕೊಪ್ಪಳ: ಆನ್​ಲೈನ್​ಲ್ಲಿ ಹೋಟೆಲ್​ ಗುಣಮಟ್ಟಕ್ಕೆ ಅಂಕ ನೀಡುವ ಮೂಲಕ ಹಣ ಗಳಿಸಬಹುದೆಂಬ ಸೈಬರ್​ ವಂಚಕರ ಜಾಲಕ್ಕೆ ಬಿದ್ದು ನಗರದ ಖಾಸಗಿ ಶಾಲೆ ಶಿಕ್ಷಕಿಯೊಬ್ಬರು 9.32 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಬೆಳಗಾವಿ ಮೂಲದ ಪ್ರಿಸ್ಕಿಲ್ಲಾ ೆರಾರೋ ಹಣ ಕಳೆದುಕೊಂಡ ಶಿಕ್ಷಕಿ. ಟೆಲಿಗ್ರಾಂ ಆ್ಯಪ್​ನಲ್ಲಿ ಪರಿಚಿತರಾದ ಸೈಬರ್​ ವಂಚಕರು ಆನ್​ಲೈನ್​ಲ್ಲಿ ಹೋಟೆಲ್​ಗಳಿಗೆ ರೇಟಿಂಗ್​ ನೀಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದೆಂದು ಆಮಿಷ ಒಡ್ಡಿದ್ದಾರೆ. ಆರಂಭದಲ್ಲಿ 150ರೂ., 200 ರೂ. ಮೊತ್ತವನ್ನು ಶಿಕ್ಷಕಿ ಖಾತೆಗೆ ಜಮೆ ಮಾಡಿ ನಂಬಿಸಿದ್ದಾರೆ. ಬಳಿಕ ಹೆಚ್ಚು ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭ ಗಳಿಸಬಹುದೆಂದು ಬಲೆ ಬೀಸಿದ್ದಾರೆ. ಶಿಕ್ಷಕಿ ವಿವಿಧ ಖಾತೆಗಳಿಂದ ಮಾ.9ರಿಂದ 21ರ ಅವಧಿಯಲ್ಲಿ 9.32 ಲಕ್ಷ ರೂ. ಹಾಕಿದ್ದು ವಾಪಸ್​ ಬರದಿದ್ದಾಗ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಸೈಬರ್​ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಿದ್ದಾರೆ.