ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ವಹಣೆ ಬೋರ್ಡ್ ತೆಲಂಗಾಣದಲ್ಲಿದ್ದು, ತಕ್ಷಣ ಹೊಸಪೇಟೆಗೆ ಸ್ಥಳಾಂತರಿಸಬೇಕು. ಜಲಾಶಯದ 33 ಕ್ರಸ್ಟ್ ಗೇಟ್ ಬದಲಾವಣೆ ಮಾಡಬೇಕು ಎಂದು ಕರ್ನಾಟಕ ರೈತ ಜನ ಸಂ ಹಾಗೂ ಹಸಿರು ಸೇನೆ ಅಧ್ಯಕ್ಷ ವೀರನಗೌಡ ಮಾಲಿಪಾಟೀಲ್ ಆಗ್ರಹಿಸಿದರು.
ಜಲಾಶಯ ನಿರ್ಮಾಣವಾದಾಗ ಹೈದ್ರಾಬಾದ್ ಪ್ರಾಂತದಲ್ಲಿದ್ದ ಕಾರಣ ಅಂದಿನ ರಾಜಧಾನಿ ಆಗಿದ್ದ ಹೈದ್ರಾಬಾದ್ನಲ್ಲಿ ಬೋರ್ಡ್ ಕಚೇರಿ ಆರಂಭಿಸಲಾಯಿತು. ಭಾಷಾವಾರು ಪ್ರಾಂತಗಳ ರಚನೆ ಆಗಿದ್ದು, ಕರ್ನಾಟಕಕ್ಕೆ ಬೋರ್ಡ್ ಸ್ಥಳಾಂತರಿಸಬೇಕು. ಜಲಾಶಯದ ಗೇಟ್ ಬದಲಾವಣೆ ಮಾಡುವಂತೆ ತಜ್ಞ ಎ.ಕೆ.ಬಜಾಜ್ ತಂಡ 2021ರಲ್ಲೇ ವರದಿ ನೀಡಿದೆ. ಆದರೂ ರ್ನಿಲಕ್ಷ$್ಯವಹಿಸಿದ ಪರಿಣಾಮ 19ನೇ ಕ್ರಸ್ಟ್ ಗೇಟ್ ತುಂಡಾಗಿ ಸಮಸ್ಯೆಯಾಯಿತು. 40&50 ಟಿಎಂಸಿ ನೀರು ನದಿಗೆ ಹರಿಯಿತು. ನಿರ್ವಹಣೆಯಲ್ಲೂ ರಾಜ್ಯ ಸರ್ಕಾರಕ್ಕೆ ಬೋರ್ಡ್ ಸ್ಪಂದಿಸಲಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಬಗ್ಗೆ ಕೇಂದ್ರ ಜಲ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಇನ್ನೊಮ್ಮೆ ನಮ್ಮ ಸಂಸದರ ಮೂಲಕ ಪತ್ರ ಕಳಿಸುತ್ತೇವೆ. ಬೋರ್ಡ್ ಸ್ಥಳಾಂತರಕ್ಕೆ ಆಗ್ರಹಿಸುತ್ತೇವೆ. ನಮ್ಮ ಜನಪ್ರತಿನಿಧಿಗಳ ರ್ನಿಲಕ್ಷ$್ಯ ಧೋರಣೆಯೂ ನಮ್ಮ ಭಾಗ ಹಿಂದುಳಿಯಲು ಕಾರಣವಾಗಿದೆ. ಇವರು ಎಚ್ಚೆತ್ತುಕೊಳ್ಳಬೇಕು. ಕೃಷ್ಣಾ ಬಿ ಸ್ಕೀಂ ಸಹ ಅನುಷ್ಠಾನವಾಗಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ನಾವು ತೀವ್ರ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಸಂಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಅವರ ಹೆಸರು ಘೋಷಿಸಿದರು.
ಪದಾಧಿಕಾರಿಗಳಾದ ಬಸವರಾಜ, ಮಲ್ಲಿಕಾರ್ಜುನ, ರಾಮಣ್ಣ, ಭಿಮಪ್ಪ, ದೊಡ್ಡನಗೌಡ, ವಿಶ್ವನಾಥ, ಗುರನಗೌಡ, ಹುಲಗಪ್ಪ ಇತರರಿದ್ದರು.