ಕೊಪ್ಪಳದಲ್ಲಿ ಶಾಸಕ ರಾವೇಂದ್ರ ಹಿಟ್ನಾಳ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಪಂ ತೆಮಾಸಿಕ ಕೆಡಿಪಿ ಸಭೆ ನಡೆಯಿತು. ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​ ಇದ್ದರು. 
ಜಿಲ್ಲೆ

ಶಿಕ್ಷಣ ಗುಣಮಟ್ಟ ಸುಧಾರಿಸಿ, ಶಾಸಕ ರಾವೇಂದ್ರ ಹಿಟ್ನಾಳ ಸೂಚನೆ

ಕೊಪ್ಪಳ: ಕಳೆದ ವರ್ಷ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಜಿಲ್ಲೆ ಸಾಧನೆ ಕಳಪೆಯಾಗಿದೆ. ಈ ವರ್ಷ ಶಿಕ್ಷಕರಿಗೆ ಉತ್ತಮ ತರಬೇತಿ ಕೊಟ್ಟು ಲಿತಾಂಶದಲ್ಲಿ ರಾಜ್ಯಕ್ಕೆ ಕೊಪ್ಪಳ ತಾಲೂಕು ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ಎಂದು ಶಾಸಕ ರಾವೇಂದ್ರ ಹಿಟ್ನಾಳ ಶಿಕ್ಷಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಪಂ ತೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಪ್ರತಿ ವರ್ಷ ಶಿಕ್ಷಣ ಗುಣಮಟ್ಟ ಸುಧಾರಣೆ ಆಗಬೇಕು. ಆದರೆ, ಕುಸಿಯುತ್ತಿದೆ. ನೀವೆಲ್ಲ ಏನು ಮಾಡುತ್ತಿದ್ದೀರಿ ? ಕಳೆದ ವರ್ಷ ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆಯನ್ನವರನ್ನು ಸಂಪರ್ಕಿಸಿ. ಅವರು ಅಳವಡಿಸಿಕೊಂಡ ಮಾನದಂಡಗಳ ಬಗ್ಗೆ ನಮ್ಮ ಶಿಕ್ಷಕರಿಗೆ ತರಬೇತಿ ಕೊಡಿಸಿ. ಶಾಲೆಗಳಿಗೆ ಬಯೋಮೆಟ್ರಿಕ್​ ಅಳವಡಿಸಿ. ಅದಕ್ಕೆ ಬೇಕಾದ ಅನುದಾನ ಕೊಡಿಸುವೆ. ಎರಡು ತಿಂಗಳಲ್ಲಿ ಎಲ್ಲ ಕೆಲಸ ಪೂರ್ಣವಾಗಬೇಕು. ನಾನೂ ತರಬೇತಿಗೆ ಬರುವೆ. ಈ ವರ್ಷ ಲಿತಾಂಶದಲ್ಲಿ ರಾಜ್ಯದ 175 ಶೈಕ್ಷಣಿಕ ತಾಲೂಕುಗಳಲ್ಲಿ ಕೊಪ್ಪಳ ಮೊದಲಿರಬೇಕು ಎಂದು ತಾಕೀತು ಮಾಡಿದರು. ಬಿಇಒ ಶಂಕ್ರಯ್ಯ ಬಯೋ ಮೆಟ್ರಿಕ್​ ಅಳವಡಿಕೆ ಹಾಗೂ ತರಬೇತಿಗೆ ವ್ಯವಸ್ಥೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ಹಾಸ್ಟೆಲ್​ಗಳ ಕೊರತೆ ಇದೆ. ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ಕಳೆದ ವರ್ಷ ಎಸ್ಸಿ, ಎಸ್ಟಿಗಳ 18.5 ಕೋಟಿ ರೂ. ವಾಪಸ್​ ಹೋಗಿದೆ. ಇದಕ್ಕೆ ಯಾರು ಜವಾಬ್ದಾರಿ ? ಮಾಹಿತಿ ಇಲ್ಲದಿದ್ದರೆ ಯಾಕೆ ಅಧಿಕಾರದಲ್ಲಿದ್ದಿರಿ ? ಹಿಂದುಳಿದ ವರ್ಗ ಕಲ್ಯಾಣ ಸಚಿವರು ನಮ್ಮವರೇ ಇದ್ದಾರೆ. ಪಜಾ, ಪಪಂ, ಹಿಂದುಳಿದ ವರ್ಗಗಳ ಇಲಾಖೆಯಿಂದ ಅವಶ್ಯ ಹಾಸ್ಟೆಲ್​ ಕುರಿತು ಪ್ರಸ್ತಾವನೆ ಸಲ್ಲಿಸಿ. ಹಿಂದುಳಿದ ವರ್ಗ ಹಾಸ್ಟೆಲ್​ ಮಕ್ಕಳಿಗೆ ಬಿಸಿನೀರು ಪೂರೈಸಿ. ನೆಪ ಹೇಳುವಂತಿಲ್ಲ. ಆಹಾರ ಇಲಾಖೆಯವರು ಜನರಿಗೆ ಅನುಕೂಲವಾಗುವಂತೆ ನ್ಯಾಯ ಬೆಲೆ ಅಂಗಡಿ ಆರಂಭಿಸಿ. ಬೆಳಗಟ್ಟಿ ಸೇರಿ ಇತರೆಡೆ ನಾಲ್ಕೆ$ದು ಕಿ.ಮೀ. ಹೋಗಿ ಪಡಿತರ ತರಬೇಕು. ಇದರ ಬಗ್ಗೆ ನಿಮಗೆ ಅರಿವಿಲ್ಲವೇ ಎಂದು ಅಧಿಕಾರಿಗಳಿಗೆ ಶಾಸಕರು ಚಾಟಿ ಬೀಸಿದರು.

ಆರೋಗ್ಯ ಇಲಾಖೆಗೆ ಕೆಕೆಆರ್​ಡಿಬಿಯಿಂದ 100 ಕೋಟಿ ರೂ.ಬಂದಿದೆ. ಗಿಣಗೇರಾ, ಹುಲಿಗಿ ಮತ್ತು ಹಿಟ್ನಾಳ ಪಿಎಚ್​ಸಿಗಳನ್ನು ಸಿಎಚ್​ಸಿಯಾಗಿ ಮೇಲ್ದರ್ಜೆಗೇರಿಸಿ. ಕುಣಿಕೇರಾ ಸೇರಿ ಅವಶ್ಯವಿರುವೆಡೆ ಪಿಎಸ್​ಸಿ ಆರಂಭಿಸಿ. 33 ಅಂಗನವಾಡಿ ಕೇಂದ್ರಗಳಗೆ ಸ್ವಂತ ಕಟ್ಟಡಬೇಕಿದೆ. 8 ನಿವೇಶನ ಸಮಸ್ಯೆ ಇದ್ದು, ಅವುಗಳನ್ನು ಬಿಟ್ಟು ಬಾಕಿ ಕೇಂದ್ರಗಳಿಗೆ ಸೂರು ಕಲ್ಪಿಸಿ. ಪ್ರಸ್ತಾವನೆ ಸಲ್ಲಿಸಿ ಮಾಹಿತಿ ನೀಡಿ. ನಿಲೋಗಿಪುರ, ಕಲಿಕೇರಿ, ಕೆರೆಹಳ್ಳಿ 110 ಕೆವಿ ವಿದ್ಯುತ್​ ಉಪ ಕೇಂದ್ರಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲಧಿಕಾರಿಗಳ ಮೂಲಕ ಕಡತ ವಿಲೇವಾರಿ ಮಾಡಿಸಿ. ಪ್ರಸ್ತಾವನೆ ಸಲ್ಲಿಸಿ ಸುಮ್ಮನೆ ಕುಳಿತರೆ ಆಗದು. ನನ್ನ ಗಮನಕ್ಕೆ ತಂದಲ್ಲಿ ಸಚಿವರ ಮೂಲಕ ಇಲಾಖೆ ಗಮನ ಸೆಳೆಯಲಾಗುವುದೆಂದರು.

ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಜಲಜೀವನ ಮಿಷಿನ್​ ಯೋಜನೆ ಪೂರ್ಣಗೊಳಿಸಿ. ಗ್ರಾಪಂ ಪಿಡಿಒಗಳು ಶೇ.100ರಷ್ಟು ಕರ ವಸೂಲಿ ಮಾಡಿ. ಬಾಪೂಜಿ ಸೇವಾ ಕೇಂದ್ರದಲ್ಲಿ 100 ಸೇವೆ ಒದಗಿಸಿ. ಸಹಕಾರ ಇಲಾಖೆಯವರು ರೈತರ ಅಗತ್ಯಕ್ಕೆ ತಕ್ಕಂತೆ ್ಯಾಕ್ಸ್​ಗಳನ್ನು ಆರಂಭಿಸಿ ಎಂದು ಸೂಚಿಸಿದರು.
ನಾಮ ನಿರ್ದೇಶಿತ ಸದಸ್ಯರಾದ ಸಂಜೀವಪ್ಪ ಹೊಸಳ್ಳಿ, ನಾಗರತ್ನ ಪೂಜಾರ, ನಾಗರಾಜ ಬಸಪ್ಪ, ಸಾದಿಕ್​ ಮಹೆಬೂಬ್​, ತೋಟಪ್ಪ ಸಿಂಟ್ರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​ ಇದ್ದರು.

ರಾಜಕಾಲುವೆ ತೆರವಾಗಲೇಬೇಕು
ಮಳೆಯಿಂದ ನಗರದ ಕೆಲ ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆ ಆಗಿದೆ. ರಾಜ ಕಾಲುವೆ ಒತ್ತುವರಿಯಾಗಿದೆ. ಮೂಲ ನೆ ಪ್ರಕಾರ ರಾಜ ಕಾಲುವೆ ಇರುವಂತೆ ನೋಡಿಕೊಳ್ಳಿ. ಯಾರೇ ಪ್ರಭಾವಿಗಳಿದ್ದರೂ ತೆರವು ಮಾಡಿ. ಕೋಟೆ ಏರಿಯಾದಿಂದ ಬಸ್​ ನಿಲ್ದಾಣವರೆಗೆ ಹಾಗೂ ಡಿಸಿ ಕಚೇರಿಯಿಂದ ಭಾಗ್ಯನಗರದವರೆಗೆ ಎರಡು ರಾಜ ಕಾಲುವೆಗಳಿವೆ. ಅವುಗಳ ಮೂಲ ಉದ್ದ, ಅಗಲ ಎಷ್ಟು, ಎಲ್ಲೆಲ್ಲಿ ಒತ್ತುವರಿಯಾಗಿದೆ ? ಯಾರೇ ಮಾಡಿದ್ದರೂ ತೆರವು ಮಾಡಿ. ತೆರವು ಅನಿವಾರ್ಯ. ನಗರಸಭೆ, ಕಂದಾಯ, ಎಡಿಎಲ್​ಆರ್​ ಜಂಟಿಯಾಗಿ ಈಕೆಲಸ ಮಾಡಿ ಎಂದು ಶಾಸಕ ಹಿಟ್ನಾಳ್​ ತಿಳಿಸಿದರು.

ಅಧಿಕಾರಿಗಳಿಗೆ ತರಾಟೆ
ಮೀನುಗಾರಿಕೆ, ರೇಷ್ಮೆ, ಅರಣ್ಯ ಸೇರಿ ಇತರ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದೇ ಅಧೀನ ಅಧಿಕಾರಿಗಳನ್ನು ಸಭೆಗೆ ಕಳಿಸಿದ್ದರು. ಅಧಿಕಾರಿಗಳು ಇಲಾಖೆ ಬಗ್ಗೆ ಶಾಸಕರು ಕೇಳಿದ ಪ್ರಶ್ನೆಗಳಿಗೆ ನಿರುತ್ತರರಾದರು. ಇದರಿಂದ ಸಿಟ್ಟಿಗೆದ್ದ ಹಿಟ್ನಾಳ ಸಭೆ ಎಂದರೆ ಏನಾದರೂ ಹೇಳಿ ಹೋದರೆ ಆಗುತ್ತದೆ ಅಂದುಕೊಂಡಿದ್ದೀರಾ ? ಸರ್ಕಾರ ನಿಮಗೆ ಸಂಬಳ ಕೊಡುವುದು ಯಾಕೆ ? ನಿಮ್ಮ ಇಲಾಖೆ ಮಾಹಿತಿ ನಿಮಗೆ ಗೊತ್ತಿಲ್ಲದಿದ್ದರೆ ಹೇಗೆ ಎಂದು ತರಾಟೆ ತೆಗೆದುಕೊಂಡರು. ನೀವು ಸಭೆ ತೆಗೆದುಕೊಂಡಾಗ ಈ ಬಗ್ಗೆ ಪ್ರಶ್ನಿಸುವುದಿಲ್ಲವಾ ಎಂದು ತಾಪಂ ಇಒ ಹಾಗೂ ಜಿಪಂ ಉಪಕಾರ್ಯದರ್ಶಿಗೆ ವೇದಿಕೆ ಮೇಲೆಯೇ ಪ್ರಶ್ನಿಸಿದರು. ಸಮರ್ಪಕ ಉತ್ತರ ನೀಡದವರು ಹಾಗೂ ಸಭೆಗೆ ಗೈರಾದವರಿಗೆ ನೋಟಿಸ್​ ನೀಡಲು ತಾಕೀತು ಮಾಡಿದರು.