ಜಿಲ್ಲೆ

ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು

Kopala - Raveendra V K

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಮುಳುಗಿ ಬಾಲಕನೋರ್ವ ಶನಿವಾರ ಮೃತಪಟ್ಟಿದ್ದಾನೆ.

ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಇಂದ್ರೇಶ (16) ಮೃತ. ಇಬ್ಬರು ಸ್ನೇಹಿತರೊಂದಿಗೆ ಸೇರಿ ಮಧ್ಯಾಹ್ನ ಈಜಾಡಲು ತೆರಳಿದ್ದಾನೆ. ಆಳ ಇರುವೆಡೆ ತೆರಳಿ ಮುಳಗಿದ್ದಾನೆ. ತಕ್ಷಣವೇ ಸ್ನೇಹಿತರು ಇತರರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿದ್ದವರು ಹೊರಗೆ ತೆಗೆದು ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅಸುನೀಗಿದ್ದಾನೆ.

ಬಾಲಕನ ಪಾಲರು ಶುಕ್ರವಾರವಷ್ಟೆ ಬೆಂಗಳೂರಿಗೆ ತೆರಳಿದ್ದಾರೆ. ಒಬ್ಬನೇ ಪುತ್ರನಾಗಿದ್ದು ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀೆ ಬರೆದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ್ದಕ್ಕೆ ಸ್ನೇಹತರೊಡಗೂಡಿ ಕೊಪ್ಪಳಕ್ಕೆ ಬಂದು ಈಜಾಡಲು ತೆರಳಿ ಪ್ರಾಣ ಕಳೆದುಕೊಂಡಿದ್ದಾನೆ.

ಟನೆ ಬೆನ್ನೆಲ್ಲೇ ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಈಜುಕೊಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಟನೆ ನಡೆದ ಬಗ್ಗೆ ಮಾಹಿತಿ ಪಡೆದರು. ಕ್ರೀಡಾಧಿಕಾರಿ ವಿಠ್ಠಲ ಜಾಬಗೌಡರ್​ ಇದ್ದರು. ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.