ಕೊಪ್ಪಳ: ಏಳನೇ ವೇತನ ಆಯೋಗ ವರದಿ ಯಥಾವತ್ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳಗೆ ಮನವಿ ಸಲ್ಲಿಸಿದರು.
ಸಂವು 6 ಲಕ್ಷ ನೌಕರರನ್ನು ಹೊಂದಿದೆ. ಪ್ರಕೃತಿ ವಿಕೋಪ, ಕೋವಿಡ್, ಪ್ರವಾಹ ಸಂದರ್ಭದಲ್ಲಿ ಸರ್ಕಾರಕ್ಕೆ ನೆರವಾಗಿದೆ. ರಾಜದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಇದ್ದ ನೌಕರರೇ ನಿಭಾಯಿಸುತ್ತಿದ್ದೇವೆ. ಜನರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟಿಸುತ್ತಿದ್ದೇವೆ. 6ನೇ ವೇತನ ಆಯೋಗ ರಚನೆಯಾಗಿ 9 ತಿಂಗಳಲ್ಲಿ ವರದಿ ಪಡೆದು ಜಾರಿ ಮಾಡಲಾಗಿದೆ. 6ನೇ ಆಯೋಗ ಜಾರಿಯಾಗಿ 5 ವರ್ಷ ಪೂರ್ಣಗೊಂಡಿದ್ದು, 2022ರಲ್ಲೇ ಪರಿಷ್ಕರಣೆ ಮಾಡಬೇಕಿತ್ತು. ಆಯೋಗ ರಚನೆಯಾಗಿ ಎರಡು ಬಾರಿ ಅವಧಿ ವಿಸ್ತರಿಸಲಾಗಿದೆ. ಕಳೆದ ಮಾರ್ಚ್ಗೆ 19 ತಿಂಗಳಾಗಿದೆ. ಅರ್ನಿದಿಷ್ಟ ಮುಷ್ಕರ ಹಮ್ಮಿಕೊಂಡಿದ್ದರಿಂದ ಶೇ.17ರಷ್ಟು ಮಧ್ಯಂತರ ಪರಿಹಾರ ನೀಡಿದೆ ಎಂದರು.
ಇದೀಗ ಚುನಾವಣೆ ನೀತಿ ಸಂಹಿತೆ ಮುಗಿದಿದೆ. 2.60 ಲಕ್ಷ ನೌಕರರ ಕೊರತೆ ಇದ್ದು, ವಾರ್ಷಿಕ 8,500 ಕೋಟಿ ರೂ. ಉಳಿತಾಯವಾಗುತ್ತಿದೆ. ವೇತನ ಆಯೋಗ ವರದಿ ಸಲ್ಲಿಸಿ 4 ತಿಂಗಳು ಮುಗಿದಿದೆ. ಕೊಟ್ಟ ಮಾತಿನಂತೆ ಪೂರ್ಣ ಪ್ರಮಾಣದಲ್ಲಿ ಯಥಾವತ್ತಾಗಿ ಜಾರಿ ಮಾಡಿ. ಎನ್ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮುಂದುವರಿಸಬೇಕು. ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು. ಈ ಬಗ್ಗೆ ಸಚಿವರು ಸಿಎಂ ಗಮನಕ್ಕೆ ತಂದು ಒತ್ತಡ ಹೇರುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಬಳಿಕ ಜಿಲ್ಲಾಡಳಿತ ಮೂಲಕವೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ, ಕಾರ್ಯದರ್ಶಿ ಶಂಕರಗೌಡ ಮಾಲಿ ಪಾಟೀಲ್, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಖಜಾಂಚಿ ವೆಂಕಟೇಶ ಕುಲಕರ್ಣಿ, ನಿರ್ದೇಶಕರಾದ ವಂದನಾ, ಶಾಂತಾ ಚೌಡ್ಕಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಶರಣಗೌಡ, ಉಪನ್ಯಾಸಕರ ಸಂದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಇತರರಿದ್ದರು.