ಜಿಲ್ಲೆ

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ದತ್ತು, ಲಿತಾಂಶ ಸುಧಾರಣೆಗೆ ಇಲಾಖೆ ಪ್ರಯೋಗ

ವಿಜಯವಾಣಿ ವಿಶೇಷ ಕೊಪ್ಪಳ

ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಲಿತಾಂಶ ಪಡೆದಿರುವ ಶಿಕ್ಷಣ ಇಲಾಖೆ ಮುಖಭಂಗಕ್ಕೀಡಾಗಿದೆ. ಈ ವರ್ಷ ರಿಸಲ್ಟ್​ ಸುಧಾರಣೆಗೆ ಈಗಿನಿಂದಲೇ ಯೋಜನೆ ರೂಪಿಸುತ್ತಿದ್ದು, ವಿಷಯವಾರು ಶಿಕ್ಷಕರಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದತ್ತು ನೀಡಲು ಮುಂದಾಗಿದೆ.

ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಟ್ಟ. ಕಳೆದ ವರ್ಷ ಜಿಲ್ಲೆ ರಾಜ್ಯದಲ್ಲಿ 30ನೇ ಸ್ಥಾನ ಪಡೆದಿದೆ. ಶೇ.56.57ರಷ್ಟು ಮಕ್ಕಳು ಪಾಸ್​ ಆಗಿದ್ದಾರೆ. ಶೇ.55.66ರಷ್ಟು ಸರ್ಕಾರಿ ಶಾಲೆ ಮಕ್ಕಳು ಉತ್ತೀರ್ಣರಾಗಿದ್ದಾರೆ. ತಾಲೂಕುವಾರು ಲಿತಾಂಶ ಗಮನಿಸಿದಲ್ಲಿ ಯಲಬುರ್ಗಾ ಪ್ರಥಮ ಸ್ಥಾನದಲ್ಲಿದ್ದರೆ ಜಿಲ್ಲಾ ಕೇಂದ್ರ ಕೊನೇ ಸ್ಥಾನ ಪಡೆದಿರುವುದು ದುರಂತ ವಿಷಯ. ಹಿಂದಿ, ಗಣಿತ, ವಿಜ್ಞಾನ ವಿಷಯಗಳಲ್ಲಿ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದಾರೆ. 2023ನೇ ಸಾಲಿಗಿಂತ 2024ರಲ್ಲಿ ಲಿತಾಂಶ ಕುಸಿತ ಕಂಡಿರುವುದು ಗುಣಮಟ್ಟ ಕುಸಿತಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ವರ್ಷ ಈಗಿನಿಂದಲೇ ಲಿತಾಂಶ ಸುಧಾರಣೆಗೆ ಇಲಾಖೆ ಮುಂದಾಗಿದೆ. ಹೊಸ ತಂತ್ರಗಳನ್ನು ಹೆಣೆಯುತ್ತಿದ್ದು, ತರಬೇತಿಗಳನ್ನು ಆರಂಭಿಸುತ್ತಿದೆ. ಜಿಲ್ಲೆಯಲ್ಲಿ 193 ಪ್ರೌಢಶಾಲೆಗಳಿದ್ದು, ಕಳೆದ ವರ್ಷ 86 ಶಾಲೆಗಳು ಶೇ.50ಕ್ಕಿಂತ ಕಡಿಮೆ ಲಿತಾಂಶ ಪಡೆದಿವೆ. ಅವುಗಳನ್ನು ಗುರಿಯಾಗಿ ಇಟ್ಟುಕೊಂಡು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ. ಈಗಾಗಲೇ ಅರ್ಧ ಶೈಕ್ಷಣಿಕ ಚಟುವಟಿಕೆಗಳು ಮುಗಿವ ಹಂತ ಸಮೀಪಿಸಿದೆ. ಸದ್ಯ 10ನೇತರಗತಿ ಮಕ್ಕಳು 9ನೇ ತರಗತಿಯಲ್ಲಿರುವಾಗ ವಿಷಯವಾರು ಪಡೆದ ನೈಜ ಲಿತಾಂಶ ಆಧರಿಸಿ ಎ&ಬಿ&ಸಿ ವರ್ಗಗಳನ್ನಾಗಿ ವಿಂಗಡಿಸಲಾಗಿದೆ.

ಪ್ರತಿ ಪಾಠ ಮುಗಿದ ಬಳಿಕ ಪಠ್ಯಾಧಾರಿತ ಚಟುವಟಿಕೆ ಹಮ್ಮಿಕೊಳ್ಳಲು ಮುಂದಾಗಿದೆ. ಅದರೊಟ್ಟಿಗೆ ಎರಡು ಟಕ ಪರೀೆ ನಡೆಸುವ ಮೂಲಕ ಮಗುವಿನ ಕಲಿಕಾ ಮಟ್ಟ ಅರಿವ ಕೆಲಸಕ್ಕೆ ಮುಂದಾಗಿದೆ. ಯಾವ ವಿಷಯದಲ್ಲಿ ವಿದ್ಯಾರ್ಥಿ ಹಿಂದುಳಿದಿದ್ದಾನೆಯೋ ಅದೇ ವಿಷಯದಲ್ಲಿ ಹೆಚ್ಚು ಸುಧಾರಣಾ ಕ್ರಮ ಅಳವಡಿಸಿ ಪಾಠ ಮನನ ಮಾಡಿಸಲು ಯೋಜನೆ ರೂಪಿಸಲಾಗುತ್ತಿದೆ. ಎಲ್ಲ ಮಕ್ಕಳಿಗೂ ಏಕ ರೀತಿ ಯೋಜನೆ ರೂಪಿಸದೇ ವಿಷಯವಾರು ಹಿಂದುಳಿದ ಮಕ್ಕಳಿಗೆ ಅದೇ ವಿಷಯ ಶಿಕ್ಷಕರ ಮೂಲಕ ಗುಂಪು ಚಟುವಟಿಕೆ ನಡೆಸಿ ವಿಷಯದ ಅರಿವು ಮೂಡಿಸಲು ತಯಾರಿ ನಡೆಸಲಾಗುತ್ತಿದೆ.

ಕಡಿಮೆ ವಿಷಯದಲ್ಲಿ ೇಲಾದವರ ಟಾರ್ಗೇಟ್​

ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ವಿಭಾಗವಾರು ವಿಂಗಡಿಸಲಾಗಿದೆ. ಮತ್ತೊಂದೆಡೆ ಶೇ.50ಕ್ಕಿಂತ ಕಡಿಮೆ ಲಿತಾಂಶ ಪಡೆದ ಶಾಲೆಗಳನ್ನು ವಿಭಜಜಿಸಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆ ಮುಖ್ಯ ಶಿಕ್ಷಕರಿಗೆ ತರಬೇತಿ ಜರುಗಲಿದೆ. ಬಳಿಕ ಶಾಲೆಗಳನ್ನು ಡಯೇಟ್​ ಉಪನ್ಯಾಸಕರಿಗೆ ದತ್ತು ನೀಡಿ ನಿರಂತರ ನಿಗಾವಹಿಸಲು ಸೂಚಿಸಲಾಗುವುದು. ಬಳಿಕ ಅಕ್ಷರ ದಾಸೋಹ, ಬಿಇಒ, ಬಿಆರ್​ಸಿಗಳಿಗೂ ಅವರ ವ್ಯಾಪ್ತಿ ಶಾಲೆಗಳನ್ನು ದತ್ತು ನೀಡಿ ಲಿತಾಂಶ ಸುಧಾರಣೆ ಟಾಸ್ಕ್​ ನೀಡಲು ಇಲಾಖೆ ಯೋಜಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಒಂದು ಅಥವಾ ಎರಡು ವಿಷಯಗಳಲ್ಲಿ ಮಾತ್ರ ೇಲಾಗುವ ಮಕ್ಕಳನ್ನು ಗುರಿಯಾಗಿಸಿ ವಿಶೇಷ ಯೋಜನೆ ಮಾಡಲಾಗುತ್ತಿದೆ. ಅವರಿಗೆ ಸರಿಯಾಗಿ ತರಬೇತಿ ನೀಡಿದಲ್ಲಿ ಉತ್ತೀರ್ಣರಾಗುವ ಮೂಲಕ ಒಟ್ಟಾರೆ ಲಿತಾಂಶ ಸುಧಾರಣೆಗೆ ನೆರವಾಗಲಿದೆ ಎಂದು ಇಲಾಖೆ ಲೆಕ್ಕಾಚಾರ ಹಾಕಿದೆ.