ಕೊಪ್ಪಳ: ಜಿಲ್ಲಾದ್ಯಂತ ಶುಕ್ರವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ -1ಅಂಗವಾಗಿ 22,753 ಮಕ್ಕಳು ಪ್ರಥಮ ಭಾಷಾ ವಿಷಯ ಎಕ್ಸಾಂ ಬರೆದರು. 73 ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀೆ ನಡೆದವು.
ಬಿರು ಬೇಸಿಗೆಯಲ್ಲಿಯೇ ಪರೀೆ ಆರಂಭವಾಗಿವೆ. ಮಕ್ಕಳು ಉತ್ಸಾಹದಿಂದಲೇ ಬೆಳಗ್ಗೆ ಪರೀಾ ಕೇಂದ್ರಗಳತ್ತ ಧಾವಿಸಿದರು. ಈ ಬಾರಿಯೂ ವೆಬ್ಕಾಸ್ಟಿಂಗ್ ಮುಂದುವರೆಸಲಾಗಿದೆ. ಕಳೆದ ವರ್ಷ ವೆಬ್ಕಾಸ್ಟಿಂಗ್ಗೆ ಭಯಪಟ್ಟಿದ್ದ ಮಕ್ಕಳು ಈ ವರ್ಷ ಅಳುಕಿಲ್ಲದೇ ಕೇಂದ್ರಗಳತ್ತ ಬಂದರು. ಗ್ರಾಮೀಣ ಭಾಗದ ಮಕ್ಕಳು ಬೆಳಗ್ಗೆಯೇ ಆಗಮಿಸದರೆ, ನಗರ ಪ್ರದೇಶದವರು ಆಟೋಗಳಲ್ಲಿ ಬಂದರು. ಇನ್ನು ಕೆಲವರು ಪಾಲಕರೊಂದಿಗೆ ಆಗಮಿಸಿದ್ದು ಕಂಡುಬಂತು. ಪಾಲಕರು ಧೈರ್ಯವಾಗಿ ಪರೀೆ ಎದುರಿಸುವಂತೆ ಮಕ್ಕಳಿಗೆ ಪ್ರೋತ್ಸಾಹ ತುಂಬಿ ಕಳಿಸಿದರು.
ಶುಕ್ರವಾರ ಪ್ರಥಮ ಭಾಷಾ ವಿಷಯ ಪರೀೆ ನಡೆಯಿತು. ಗಂಗಾವತಿ 23, ಕೊಪ್ಪಳ 21, ಕುಷ್ಟಗಿ 15 ಹಾಗೂ ಯಲಬುರ್ಗಾ ತಾಲೂಕಿನ 14 ಒಳಗೊಂಡು ಜಿಲ್ಲಾದ್ಯಂತ 73 ಕೇಂದ್ರಗಳಲ್ಲಿ ಎಕ್ಸಾಂ ನಡೆದವು. 29 ಮಾರ್ಗಾಧಿಕಾರಿಗಳು ಪರೀಾ ಸಮಯಕ್ಕೆ ಸರಿಯಾಗಿ ಪ್ರಶ್ನೆಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಿದರು. ಜಿಲ್ಲಾ ಮಟ್ಟದಲ್ಲಿ ಮೂರು ಹಾಗೂ ತಾಲೂಕು ಮಟ್ಟದಲ್ಲಿ ್ಲೆಯಿಂಗ್ ಸ್ಕಾ$$್ವಡ್ಗಳು ಅಲ್ಲಲ್ಲಿ ಭೇಟಿ ನೀಡಿ ಪರೀಾ ಕಟ್ಟುನಿಟ್ಟು ಪರಿಶೀಲಿಸಿದರು. ಡಿಡಿಪಿಐ, ಬಿಇಒಗಳು ಹಾಗೂ ನೋಡಲ್ ಅಧಿಕಾರಿಗಳು ಆಯ್ದ ಕೇಂದ್ರಗಳಿಗೆ ತೆರಳಿ ವೀಸಿದರು.
ಪ್ರಥಮ ಭಾಷಾ ವಿಷಯಕ್ಕೆ ಗಂಗಾವತಿ ತಾಲೂಕಿನಲ್ಲಿ 7,390, ಕೊಪ್ಪಳ 6,478, ಕುಷ್ಟಗಿ 4,513 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 4,919 ಮಕ್ಕಳು ಸೇರಿ 23,300 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಗಂಗಾವತಿ ತಾಲೂಕಿನಲ್ಲಿ 7,170, ಕೊಪ್ಪಳ 6,359, ಕುಷ್ಟಗಿ 4,436 ಮತ್ತು ಯಲಬುರ್ಗಾ ತಾಲೂಕಿನಲ್ಲಿ 4,788 ಸೇರಿ 22,753 ಮಕ್ಕಳು ಪರೀೆ ಬರೆದರು. ಗಂಗಾವತಿ ತಾಲೂಕು ಕೇಂದ್ರಗಳಲ್ಲಿ 220, ಕೊಪ್ಪಳ 119, ಕುಷ್ಟಗಿ 77 ಹಾಗೂ ಯಲಬುರ್ಗಾ ತಾಲೂಕು ಕೇಂದ್ರಗಳಲ್ಲಿ 131 ಒಟ್ಟು ಜಿಲ್ಲಾದ್ಯಂತ 547 ವಿದ್ಯಾರ್ಥಿಗಳು ಗೈರಾದರು.