ಕೊಪ್ಪಳ: ಜಿಲ್ಲಾದ್ಯಂತ 73 ಕೇಂದ್ರಗಳಲ್ಲಿ ಬುಧವಾರ ನಡೆದ ವಿಜ್ಞಾನ ವಿಷಯ ಪರೀಕ್ಷೆ 23,085 ವಿದ್ಯಾರ್ಥಿಗಳು ಹಾಜರಾದರೆ, 646 ಮಕ್ಕಳು ಗೈರಾದರು.
ಗಂಗಾವತಿ ತಾಲೂಕಿನ 23, ಕೊಪ್ಪಳ 21, ಕುಷ್ಟಗಿ 15 ಹಾಗೂ ಯಲಬುಗಾ ತಾಲೂಕಿನ 14 ಒಟ್ಟು 73 ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ 1.30ವರೆಗೆ ಪರೀಕ್ಷೆ ನಡೆದವು. ಗಂಗಾವತಿ ತಾಲೂಕಿನಲ್ಲಿ 7,521, ಕೊಪ್ಪಳ 6,604, ಕುಷ್ಟಗಿ 4,593 ಮತ್ತು ಯಲಬುರ್ಗಾ ತಾಲೂಕಿನಲ್ಲಿ 5,013 ಒಟ್ಟು 23,731 ಮಕ್ಕಳು ಪರೀೆಗೆ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಗಂಗಾವತಿ ತಾಲೂಕಿನಲ್ಲಿ 7,278, ಕೊಪ್ಪಳ 6,457, ಕುಷ್ಟಗಿ 4,499 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 4,851 ಒಟ್ಟು 23,085 ವಿದ್ಯಾರ್ಥಿಗಳು ಸುಗಮವಾಗಿ ಪರೀೆ ಬರೆದರು. ಗಂಗಾವತಿ ತಾಲೂಕಿನಲ್ಲಿ 243, ಕೊಪ್ಪಳ 147, ಕಕುಷ್ಟಗಿ 94 ಮತ್ತು ಯಲಬುರ್ಗಾ ತಾಲೂಕಿನಲ್ಲಿ 162 ಒಟ್ಟು 646 ಮಕ್ಕಳು ಗೈರು ಹಾಜರಾದರು.