ಕೊಪ್ಪಳ: ಜಿಲ್ಲಾದ್ಯಂತ 73 ಕೇಂದ್ರಗಳಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ದ್ವೀತಿಯ ಭಾಷಾ ವಿಷಯ ಪರೀೆಗೆ 600 ವಿದ್ಯಾರ್ಥಿಗಳು ಗೈರಾದರು.
ಗಂಗಾವತಿ ತಾಲೂಕಿನಲ್ಲಿ 7,373, ಕೊಪ್ಪಳ 6,511, ಕುಷ್ಟಗಿ 4,520 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 4,971 ಒಟ್ಟು 23,375 ಮಕ್ಕಳು ಪರೀೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಗಂಗಾವತಿ ತಾಲೂಕಿನಲ್ಲಿ 7,147, ಕೊಪ್ಪಳ 6,366, ಕುಷ್ಟಗಿ 4,441 ಮತ್ತು ಯಲಬುರ್ಗಾ ತಾಲೂಕಿನಲ್ಲಿ 4,821 ಒಟ್ಟು 22,775 ಅಭ್ಯರ್ಥಿಗಳು ಪರೀೆಗೆ ಹಾಜರಾಗಿ ಬರೆದರು. ಗಂಗಾವತಿ ತಾಲೂಕಿನ 226, ಕೊಪ್ಪಳ 145, ಕುಷ್ಟಗಿ 79 ಮತ್ತು ಯಲಬುರ್ಗಾ ತಾಲೂಕಿನಲ್ಲಿ 150 ಒಟ್ಟು 600 ವಿದ್ಯಾರ್ಥಿಗಳು ಗೈರಾದರು.