ಜಿಲ್ಲೆ

ತಾಯಿ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ

Kopala - Raveendra V K

ಕೊಪ್ಪಳ: ರಾಜ್ಯಾದ್ಯಂತ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ&1 ಆರಂಭವಾಗಿವೆ. ತಾಯಿ ಸಾವಿನ ನೋವಲ್ಲೂ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ವಿದ್ಯಾರ್ಥಿಯೋರ್ವ ಪರೀೆ ಬರೆದಿದ್ದಾನೆ.

ಅಡಿವಯ್ಯಸ್ವಾಮಿ ಪರೀಕ್ಷೆ ಬರೆದ ವಿದ್ಯಾರ್ಥಿ. ಈತನ ತಾಯಿ ವಿಜಯಲಕ್ಷಿ$್ಮ ವಾರದ ಹಿಂದೆ ಜಾರಿ ಬಿದ್ದು ಕೋಮಾಗೆ ಹೋಗಿದ್ದರು. ತಲೆಯಲ್ಲಿ ರಕ್ತ ಹೆಪು$್ಪಗಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಗುರುವಾರ ಹುಬ್ಬಳ್ಳಿಗೆ ರವಾನಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ತಾಯಿ ಮರಣಿಸಿದ ದು@ಖದಲ್ಲಿದ್ದರೂ ಬಾಲಕ ನೋವಿನಲ್ಲೇ ಪರೀೆಗೆ ಹಾಜರಾಗಿದ್ದಾನೆ.

ಪೋಷಕರು, ಶಿಕ್ಷಕರು ಧೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಪ್ರೇರಣೆ ನೀಡಿದರು. ವಿದ್ಯಾರ್ಥಿ ಗಂಗಾವತಿ ತಾಲೂಕಿನ ಕೇಸರಹಟ್ಟಿ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಹೇರೂರು ಗ್ರಾಮದಲ್ಲೇ ಪರೀಕ್ಷಾ ಕೇಂದ್ರ ಇದ್ದಿದ್ದರಿಂದ ಅನುಕೂಲವಾಗಿದೆ. ಸಂಜೆ ಬಳಿಕ ಬಾಲಕ ತಾಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದನು.