ವಿ.ಕೆ.ರವೀಂದ್ರ ಕೊಪ್ಪಳ : ದೇಶಾದ್ಯಂತ ಮರ್ಯಾದ ಪುರುಷ ಶ್ರೀರಾಮನ ಜಪ ಶುರುವಾಗಿದೆ. ನೂರಾರು ವರ್ಷಗಳಿಂದ ರಾಮನ ಆಲಯ ಕಣ್ತುಂಬಿಕೊಳ್ಳಬೇಕೆಂಬ ಬಯಕೆ ಹೊತ್ತ ಕಣ್ಣುಗಳಿಗೆ ಜ.22ರಂದು ಅಯೋಧ್ಯೆಯಲ್ಲಿ ಸಾಕಾರಗೊಳ್ಳಲಿದೆ. ಕಿಷ್ಕಿಂಧಾ ಕಾಂಡ ಇಲ್ಲದೇ ರಾಮನ ಚರಿತ್ರೆ ಅಪೂರ್ಣವಾಗುತ್ತದೆ. ಕಿಷ್ಕಿಂಧಾ ಪ್ರದೇಶವೇ ಇಂದಿನ ಆನೆಗೊಂದಿ ಭಾಗ. ಇದಕ್ಕೆ ಪೂರಕ ಅನೇಕ ಸ್ಥಳಗಳು ಇಲ್ಲಿರುವುದು ವಿಶೇಷ.
ಲಂಕಾಧಿಪತಿಯಿಂದ ಅಪಹರಣಗೊಂಡ ಸೀತೆಯನ್ನು ಅರಸುತ್ತ ಶ್ರೀರಾಮಚಂದ್ರ ಲಕ್ಷಣನೊಡನೆ ಕಿಷ್ಕಿಂಧೆಗೆ ಬರುತ್ತಾನೆ. ಇಲ್ಲಿಯೇ ಸುಗ್ರೀವ, ಹನುಮರ ಸಂಗಮವಾಗುತ್ತದೆ. ನಂತರ ವಾಲಿ ವಧೆ ಮಾಡಿ ಸುಗ್ರೀವನಿಗೆ ರಾಜ್ಯ ಮರಳಿಸುವುದು ಬಳಿಕ ಲಂಕೆಯೆಡೆಗೆ ಪಯಣ ಬೆಳೆಸುತ್ತಾನೆ.
ರಾಮ-ಹನುಮರ ಸಂಗಮವಾದ ಕಿಷ್ಕಿಂಧಾ ಪ್ರದೇಶವೇ ಇಂದಿನ ಆನೆಗೊಂದಿ ಭಾಗ ಎಂಬ ನಂಬಿಕೆ. ಪೂರಕವಾಗಿ ವಾಲಿಖಿಲ್ಲಾ, ಮಹರ್ಷಿ ಮಾತಂಗ ಮುನಿ ಪರ್ವತ, ಆಂಜನೇಯ ಜನಿಸಿದ ಅಂಜನಾದ್ರಿ ಬೆಟ್ಟ, ಇನ್ನಿತರ ಪ್ರದೇಶಗಳು ಈಗಲೂ ಈ ಭಾಗದಲ್ಲಿ ಕಾಣ ಸಿಗುತ್ತವೆ.
ರಾಮನಿಗೆ ಸಾಥ್ ನೀಡಿದ್ದು ಕಪಿ ಸೈನ್ಯ. ರಾಮಾಯಣದ ಉಲ್ಲೇಖ ಹೇಳುವ ದೇಶದ ಇತರ ಪ್ರದೇಶಗಳಲ್ಲಿ ಕಪಿ ಸೈನ್ಯದ ನಿಖರ ಉಲ್ಲೇಖವಿಲ್ಲ. ಆನೆಗೊಂದಿ ಭಾಗದಲ್ಲಿ ಮಾತ್ರ ಇರುವುದು ಉಲ್ಲೇಖನೀಯ. ಪೂರಕವಾಗಿ ಈ ಪ್ರದೇಶದ ಗ್ರಾಮಗಳಲ್ಲಿ ಆಂಜನೇಯನ ಮೂರ್ತಿಗಳು, ಹೆಸರಿನ ಊರುಗಳು ಸಾಕಷ್ಟು ಕಾಣ ಸಿಗುತ್ತವೆ.
ಪಂಪಾನದಿಯೇ ಸದ್ಯ ತುಂಗಭದ್ರಾ ನದಿಯಾಗಿ ಹರಿಯುತ್ತಿದೆ. ಅನೇಕ ಶಾಸನಗಳು, ಪುರಾಣಗಳಲ್ಲಿ ಸ್ಥಳ ನಾಮ ಉಲ್ಲೇಖ ಇರುವುದು ಅಂಜನಾದ್ರಿ ಪರ್ವತವೇ ಆಂಜನೇಯನ ಜನ್ಮ ಸ್ಥಳ ಎಂಬುದಕ್ಕೆ ಸಾಕ್ಷ$್ಯ ಒದಗಿಸುತ್ತವೆ.
ಋಷ್ಯಮೂಕ ಪರ್ವತ : ಸುಗ್ರೀವನ ಅಣ್ಣ ವಾಲಿ ಮಹಾನ್ ಬಲಶಾಲಿ. ಆತ ಮಾತಂಗ ಮುನಿಗಳಿಂದ ಶಾಪಗ್ರಸ್ಥನಾದ ಕಾರಣ ಮಾತಂಗ ಪರ್ವತ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಅಣ್ಣನಿಂದ ಪೆಟ್ಟು ತಿಂದು ರಾಜ್ಯ ಕಳೆದುಕೊಂಡ ಸುಗ್ರೀವ ಮಾತಂಗ ಪರ್ವತದಲ್ಲಿ ಆಶ್ರಯ ಪಡೆದಿರುತ್ತಾನೆ. ಮಾತಂಗ ಮುನಿಗಳು ತಪಗೈದ ಋಷ್ಯಮೂಕ ಪವರ್ತವೂ ಇಲ್ಲಿರುವುದು ಮತ್ತೊಂದು ಐತಿಹಾಸಿಕ ಉಲ್ಲೇಖವಾಗಿದೆ.
ವಾಲಿಖಿಲ್ಲಾ : ಸುಗ್ರೀವನ ಅಣ್ಣ ವಾಲಿ ರಾಕ್ಷಸನನ್ನು ವಧೆ ಮಾಡಲು ತೆರಳಿದ ಬೃಹತ್ ಗುಹೆ, ವಾಸವಿದ್ದ ಪ್ರದೇಶಗಳು ಆನೆಗೊಂದಿ ಭಾಗದ ಪ್ರಮುಖ ಪ್ರವಾಸಿ ತಾಣಗಳು. ಆದಿಶಕ್ತಿ ದುರ್ಗಾ ಮಾತೆ ದೇವಾಲಯ, ಆನೆಗೊಂದಿ ಭಾಗದಲ್ಲಿ ಈ ಪ್ರದೇಶಗಳು ಬರುತ್ತವೆ. ಆದಿಶಕ್ತಿ ದುರ್ಗಾಂಬಾ ದೇವಾಲಯವೂ ಈ ಭಾಗದಲ್ಲಿದ್ದು, ಭಕ್ತರ ಭಕ್ತಿಯ ತಾಣವಾಗಿದೆ.
ಪಂಪಾ ಸರೋವರ : ರಾಮ&ಲಕ್ಷ$್ಮಣರು ಕಿಷ್ಕಿಂಧೆಗೆ ಭೇಟಿ ನೀಡಿದಾಗ ಸ್ನಾನಗೈದ ಪ್ರದೇಶವೇ ಪಂಪಾ ಸರೋವರ. ಈ ಪ್ರದೇಶದಲ್ಲಿಯೇ ಆಂಜನೇಯನ ತಾಯಿ ಅಂಜನಾದೇವಿ ತಪಗೈದು ಹನುಮನಿಗೆ ಜನ್ಮ ನೀಡುತ್ತಾಳೆ ಎಂಬ ಐತಹ್ಯವಿದೆ. ರಾಮ&ಲಕ್ಷ$್ಮಣರು ಇಲ್ಲಿಯೇ ಕೆಲ ಕಾಲ ತಂಗಿದ್ದರು.
ಇಷ್ಟಲ್ಲದೇ ಶಬರಿಗಿರಿ ಸೇರಿ ಅನೇಕ ಐತಿಹಾಸಿ ಪ್ರದೇಶಗಳು ಈ ಭಾಗದಲ್ಲಿವೆ. ಹೀಗಾಗಿ ಇದೇ ಕಿಷ್ಕಿಂಧಾ ಕಾಂಡ ನಡೆದ ಪ್ರಮುಖ ಪ್ರದೇಶವೆಂಬ ನಂಬಿಕೆ ಈ ಭಾಗದಲ್ಲಿದೆ. ಇದಕ್ಕೆ ಪೂರಕ ಅಂಶಗಳು ಪುಷ್ಠಿ ನೀಡಿವೆ. ಇದೇ ಕಾರಣಕ್ಕೆ ವಿದ್ಯಾರಣ್ಯರು ಹಿಂದು ಸಾಮ್ರಾಜ್ಯ ವಿಜಯನಗರ ಸ್ಥಾಪನೆಗೆ ಈ ಪ್ರದೇಶ ಆಯ್ದುಕೊಂಡರೆಂಬ ಮಾತುಗಳಿವೆ.