ಜಿಲ್ಲೆ

ಕೌಶಲಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

Kopala - Raveendra V K

ಕೊಪ್ಪಳ: ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿಪಿ&ಟಿಎಸ್ಪಿ ಯೋಜನೆಯಡಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ, ಅತಿಥ್ಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ತರಬೇತಿಗೆ ಮರು ಅರ್ಜಿ ಆಹ್ವಾನಿಸಲಾಗಿದೆ.

2024&-25ನೇ ಸಾಲಿನಲ್ಲಿ 292 ಪಜಾ, 162 ಪಪಂ ಅಭ್ಯರ್ಥಿಗಳಿಗೆ ಫುಡ್​ ಕ್ರಾಪ್ಟ ಇನ್​ಸ್ಟಿಟ್ಯೂಟ್​ ವಿಷಯ ಬಗ್ಗೆ ಹಾಗೂ ಇನ್​ಸ್ಟಿಟ್ಯೂಟ್​ ಆಫ್​ ಹೋಟೆಲ್​ ಮ್ಯಾನೇಜಮೇಂಟ್​ ಮೂಲಕ ವಸತಿರಹಿತ ಕಾರ್ಯಕ್ರಮ ಜಾರಿಗೂಳಿಸಲು ಉದ್ದೇಶಿಸಲಾಗಿರುತ್ತದೆ. ಕನಿಷ್ಠ 10ನೇ ತರಗತಿ ಪಾಸ್​ ಆಗಿರಬೇಕು. ಆಸಕ್ತರು ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿಂದ ಅರ್ಜಿ ಉಚಿತವಾಗಿ ಪಡೆದು ಏ.5 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 08539-225566ಗೆ ಸಂಪರ್ಕಿಸಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.