ಜಿಲ್ಲೆ

ಸಿದ್ದರಾಮೇಶ್ವರ ಜಯಂತಿ 31ಕ್ಕೆ

ಕೊಪ್ಪಳ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಜಿಲ್ಲಾ ಭೋವಿ ಸಮುದಾಯ ಸಹಯೋಗದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಜ.31ರಂದು ಹಮ್ಮಿಕೊಳ್ಳಲಾಗಿದೆ. ಸಮುದಾಯ ಬಾಂಧವರು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಭೋವಿ ಸಮುದಾಯ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ತಿಳಿಸಿದರು.

ಕೊಪ್ಪಳದ ಸಾಹಿತ್ಯ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಇರಲಿದೆ. ಇದಕ್ಕು ಮುನ್ನಾ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ವಿವಿಧ ಕಲಾ ತಂಡಗಳು ಭಾಗಿಯಾಗಲಿವೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಸೇರಿ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಮುದಾಯ ಮುಖಂಡರು ಭಾಗಿಯಾಗುವರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಭೋವಿ ಸಮುದಾಯ ಹಿಂದುಳಿದಿದ್ದು, ಇನ್ನಷ್ಟು ಅವಕಾಶ, ಯೋಜನೆಗಳನ್ನ ಸರ್ಕಾರ ರೂಪಿಸಬೇಕಿದೆ. ನ್ಯಾ.ಸದಾಶಿವ ಆಯೋಗ ವರದಿ ಜಾರಿಯಿಂದ ನಮಗೆ ಅನ್ಯಾಯವಾಗುತ್ತದೆ. ಎಸ್ಟಿ ವರ್ಗದ ಎಲ್ಲ ಜಾತಿಯ ಸಾಮಾನ್ಯ ಜನರಿಗೆ ಈಗಿರುವ ಮೀಸಲು ಪದ್ಧತಿಯಿಂದ ಯಾವುದೇ ಸಮಸ್ಯೆಗಳಾಗಿಲ್ಲ. ಆದರೆ, ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಅದನ್ನು ಮುನ್ನೆಲೆಗೆ ತಂದಿದ್ದಾರೆ. ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯದವರು ವರದಿಗೆ ವಿರುದ್ಧವಾಗಿದ್ದೇವೆ. ನಮ್ಮ ಸಮುದಾಯದ ಶಾಸಕ, ಸಚಿವರು ಅದನ್ನು ವಿರೋಧಿಸಿದ್ದರಿಂದಲೇ ಇಷ್ಟು ದಿನ ಜಾರಿಯಾಗಿರಲಿಲ್ಲ ಎಂದರು.

ಭೋವಿ ಸಮುದಾಯ ಕೊಪ್ಪಳ ತಾಲೂಕು ಅಧ್ಯಕ್ಷ ಹುಚ್ಚಪ್ಪ ಭೋವಿ, ಜಿಲ್ಲಾ ನಿರ್ದೇಶಕ ಮಾರುತೆಪ್ಪ ಭೋವಿ, ಜಿಲ್ಲಾ ಪ್ರ.ಕಾ. ಲಕ್ಷ$್ಮಣ ಪೂಜಾರ, ಜಿಲ್ಲಾ ಖಜಾಂಚಿ ರಾಮಣ್ಣ ಅಳವಂಡಿ, ಹನುಮಂತ ಕುಷ್ಟಗಿ ಇತರರಿದ್ದರು.