SHIVARAJ TANGADAGI 
ಜಿಲ್ಲೆ

ಬಡವರ ಪರ ಇದ್ದವರಿಗೆ ನೋಟಿಸ್​, ತಂಗಡಗಿ

ಕೊಪ್ಪಳ: ಜಾರಿ ನಿರ್ದೇಶನಾಲಯ ಬಡವರು, ರೈತರು, ಕಾರ್ಮಿಕರ ಪರ ಇದ್ದವರು, ಜನಪ್ರಿಯ ವ್ಯಕ್ತಿಗಳಿಗೆ ನೋಟಿಸ್​ ನೀಡುತ್ತದೆ. ಅವರಿಗೆ ಬಿಜೆಪಿಯಲ್ಲಿರುವ ಭ್ರಷ್ಟರು ಕಾಣುವುದಿಲ್ಲವೆಂದು ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಇಡಿ ನೋಟಿಸ್​ ನೀಡಿದ್ದಕ್ಕೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಮಾತನಾಡಿದರು.

ಬಿಜೆಪಿಯಲ್ಲಿ ಯಾರೂ ಅಕ್ರಮ ಮಾಡಿಲ್ಲವಾ ? ಅವರಿಗೇಕೆ ನೋಟಿಸ್​ ನೀಡುತ್ತಿಲ್ಲ. ನೋಟಿಸ್​ ಕೊಟ್ಟು ಹೆದರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಅದಕ್ಕೆಲ್ಲ ನಾವು ಬಗ್ಗುವವರಲ್ಲ. ಜನಪರ ಕೆಲಸಗಳನ್ನು ಸಿಎಂ ಮಾಡುತ್ತಿದ್ದಾರೆ. ಅದನ್ನು ಸಹಿಸದೇ ಇಂಥದ್ದೆಲ್ಲ ಮಾಡುತ್ತಿದ್ದಾರೆಂದು ಸಮರ್ಥಿಸಿಕೊಂಡರು.

ಬಿಜೆಪಿಗರಲ್ಲಿ 16 ಬಣಗಳಾಗಿವೆ. ಸಂಸದ ಸುಧಾಕರ ಸಹ ನಿನ್ನೆ ಸಿಡಿದೆದ್ದಿದ್ದಾರೆ. ಮೊದಲು ತಮ್ಮ ಪಕ್ಷದಲ್ಲಿದ್ದವರನ್ನು ಸರಿಯಾಗಿ ಇಟ್ಟುಕೊಳ್ಳಲಿ. ನಮ್ಮದು ದೊಡ್ಡ ಪಕ್ಷ. ಯಾರು ಬಂದರೂ ಸ್ವಾಗತಿಸುತ್ತೇವೆ. ರಾಮುಲು ಬಂದರೂ ಸ್ವಾಗತ ಎಂದರು.