ಜಿಲ್ಲೆ

ಟಿಪ್ಪರ್​ ಡಿಕ್ಕಿಯಾಗಿ 120 ಕುರಿ ಸಾವು

Kopala - Raveendra V K

ಕೊಪ್ಪಳ: ತಾಲೂಕಿನ ಗಿಣಿಗೇರಾ ಬಳಿ ರಾಷ್ಟ್ರೀಯ ಹೆದ್ದಾರಿ 64ರಲ್ಲಿ ಟಿಪ್ಪರ್​ ಡಿಕ್ಕಿಯಾಗಿ 40 ಕುರಿಗಳು ಧಾರುಣವಾಗಿ ಸಾವಿಗೀಡಾಗಿವೆ.

ಬೇವಿನಾಳ ಗ್ರಾಮದ ಮಲ್ಲಯ್ಯ ಮತ್ತು ಚಿದಾನಂದಪ್ಪ ಎಂಬ ಕುರಿಗಾಹಿಗಳು ಎಂದಿನಂತೆ ಕುರಿ ಮೇಯಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ಕಿಲೋಸ್ಕರ್​ ಕಾರ್ಖಾನೆ ಮುಂಭಾಗದಲ್ಲಿ ಬರುವಾಗ ವೇಗವಾಗಿ ಬಂದ ಟಿಪ್ಪರ್​ ಚಾಲಕನ ನಿಯಂತ್ರಣ ತಪ್ಪಿ ಕುರಿಹಿಂಡಿನ ಮೇಲೆ ಹರಿದಿದೆ. ಪರಿಣಾಮ 120ಕ್ಕೂ ಹೆಚ್ಚು ಕುರಿಗಳು ರಸ್ತೆಯಲ್ಲೇ ಸತ್ತಿವೆ. ಕುರಿಗಳ ದೇಹದ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಘಾತದ ಭೀಕರತೆ ಪ್ರತಿಬಿಂಬಿಸಿತು.

ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳ ಕುಟುಂಬದವರ ಆಕ್ರಂದನ ನೋಡುಗರ ಕಣ್ಣಲ್ಲಿ ನೀರು ತರಿಸಿತು. ಟನೆಯಿಂದ ಕೆಲಕಾಲ ಟ್ರಾಫಿಕ್​ ಉಂಟಾಯಿತು. ವಿಷಯ ತಿಳಿದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಮುನಿರಾಬಾದ್​ ಪಿಎಸ್​ಐ ಸುನೀಲ್​ ಕುಮಾರ್​ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಟ್ರಾಫಿಕ್​ ಚದುರಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಮುನಿರಾಬಾದ್​ ಠಾಣೆ ವ್ಯಾಪ್ತಿಯಲ್ಲಿ ಟನೆ ನಡೆದಿದೆ.