ಜಿಲ್ಲೆ

ಎಸ್​ಡಿಪಿಐ ಕಾರ್ಯಕರ್ತರ ಮೌನ ಪ್ರತಿಭಟನೆ

Kopala - Raveendra V K

ಕೊಪ್ಪಳ: ವಕ್ಫ ತಿದ್ದುಪಡಿ ಮಸೂದೆ ರದ್ದು ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಸೋಮವಾರ ಎಸ್​ಡಿಪಿಐ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ವಕ್ಫ ಕಾಯ್ದೆಗೆ ತಿದ್ದುಪಡಿ ಮಾಡಿ ಹೊಸ ಮಸೂದೆ ಮಂಡಿಸಿದೆ. ಇದು ಮುಸ್ಲಿಮರಿಗೆ ಕರಾಳ ಶಾಸನವಾಗಲಿದೆ. ಇದನ್ನು ಖಂಡಿಸಿ ಎಸ್​ಡಿಪಿಐ ಹಲವು ಹೋರಾಟ ರೂಪಿಸಿದೆ. ಹೋರಾಟ ದಿಕ್ಕು ತಪ್ಪಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ೈಜಿ ಅವರನ್ನು ಅಕ್ರಮ ಹಣ ವರ್ಗಾವಣೆ ಸುಳ್ಳು ಆರೋಪದಡಿ ಬಂಧಿಸಲಾಗಿದೆ. ಇದು ಕೇಂದ್ರದ ದಮನ ನೀತಿ. ಇನ್ನು ಪ್ಯಾಲಿಸ್ತಿನ್​ನಲ್ಲಿ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಸಿದ್ದು ಖಂಡನೀಯ ಎಂದು ಘೋಷಣೆ ಪ್ರದರ್ಶಿಸಿ ಗಮನ ಸೆಳೆದರು. ಎಸ್​ಡಿಪಿಐ ಜಿಲ್ಲಾ ಕಾರ್ಯಕರ್ತರಿದ್ದರು.