ಜಿಲ್ಲೆ

ಎಲ್ಲ ಸಮುದಾಯ ನಿಮ್ಮ ಜಾತಿ ನಮೂದಿಸಿ

Kopala - Raveendra V K

ಕೊಪ್ಪಳ: ಸರ್ಕಾರ ಕೈಗೊಂಡಿರುವ ಪಜಾಗಳ ಸಮೀೆಯಲ್ಲಿ ಪಜಾಯ 101 ಜಾತಿಗಳ ಜನರು ತಮ್ಮ ಮೂಲ ಜಾತಿಯನ್ನು ನಮೂದಿಸಬೇಕೆಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಮ್ಮ ಭಾಗದಲ್ಲಿ ಹರಿಜನ, ಮಾದರ, ಆದಿ ಕರ್ನಾಟಕ ಹೀಗೆ ವಿವಿಧ ಹೆಸರುಗಳಲ್ಲಿ ಜಾತಿ ನಮೂದಿಸಿದ್ದಾರೆ. ಈಗ ನಡೆವ ಸಮೀೆಯಲ್ಲಿ ಹೀಗೆ ಬೇರೆ ಬೇರೆ ಹೆಸರು ಬರೆಸಬಾರದು. ಎಲ್ಲರೂ ತಮ್ಮ ಮೂಲ ಜಾತಿ ಹೆಸರು ಬರೆಸಬೇಕು. ಮಾದಿಗರು ಕಡ್ಡಾಯವಾಗಿ ಮಾದಿಗ ಎಂದೇ ಬರೆಸಬೇಕು. ಈಬಗ್ಗೆ ನಿಮ್ಮ ಸಹೋದರರು, ನೆರೆ ಹೊರೆಯವರಿಗೆ ಸರಿಯಾದ ಮಾಹಿತಿ ನೀಡಿ. ಸಮೀಾ ಸಿಬ್ಬಂದಿಗೆ ಕಡ್ಡಾಯವಾಗಿ ಪೆನ್ನಿಂದಲೇ ಮಾಹಿತಿ ಬರೆದುಕೊಳ್ಳಲು ತಿಳಿಸಿ. ಮಾಹಿತಿ ತಪ್ಪಾಗಿ ನೀಡುತ್ತಿದ್ದಾರೆ ಎಂದೆನಿಸದರೆ ಗಣತಿದಾರರು ಪೂರ್ಣವಾಗಿ ವಿಚಾರಿಸಬೇಕೆ. ಅನ್ಯ ಜಾತಿ ಗಣತಿದಾರರು ಬೇಕೆಂದೇ ತಪು$್ಪ ಮಾಹಿತಿ ನೀಡಿದಲ್ಲಿ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ವೇದಿಕೆ ಪದಾಧಿಕಾರಿಗಳಾದ ಮುದುಕಪ್ಪ ಎಂ.ಹೊಸಮನಿ, ದುರಗೇಶ ಬರಗೂರು, ನಾಗರಾಜ ಮುದ್ದಾಬಳ್ಳಿ, ಸುಂಕಪ್ಪ ಮೀಸಿ ಇದ್ದರು.