ಜಿಲ್ಲೆ

ಮಹಿಳಾ ಶಿಕ್ಷಣ ಕಟ್ಟಿದವರು ಸಾವಿತ್ರಿಬಾಯಿ

Kopala - Raveendra V K

ಕೊಪ್ಪಳ: ಅಕ್ಷರದವ್ವ ಸಾವಿತ್ರಿಬಾಯಿ ುಲೆ ಮಹಿಳಾ ಶಿಕ್ಷಣ ಕಟ್ಟಿ ಬೆಳೆಸಿದವರು ಎಂದು ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆ ಜಿಲ್ಲಾ ಸಂಚಾಲಕಿ ಮಂಜುಳಾ ಮಜ್ಜಿಗಿ ಹೇಳಿದರು.

ತಾಲೂಕಿನ ಬಿ.ಹೊಸಳ್ಳಿ ಕೆರೆಯಲ್ಲಿ ಶುಕ್ರವಾರ ನರೇಗಾ ಕಾರ್ಮಿಕರೊಂದಿಗೆ ಸಾವಿತ್ರಿಬಾಯಿ ುಲೆ ಜನ್ಮ ದಿನಾಚರಣೆ ಮಾಡಿ ಮಾತನಾಡಿದರು.

ಶಿಕ್ಷಣದಿಂದಲೇ ಮಹಿಳೆಯರಿಗೆ ಮುಕ್ತಿ ಸಿಗುವುದು ಎಂದು ುಲೆ ನಂಬಿದ್ದರು. ಮಹಿಳಾ ಶಿಕ್ಷಣ, ವಿಧವಾ ಪುನರ್​ ವಿವಾಹಕ್ಕೆ ಧ್ವನಿ ಎತ್ತಿದರು. ಬಾಲ್ಯ ವಿವಾಹ, ವರದಕ್ಷಿಣೆ, ಜಾತಿ ತಾರತಮ್ಯ, ಮೌಢ್ಯತೆ ವಿರುದ್ಧ ಹೋರಾಟ ಕಟ್ಟಿದ ಧೀರೆ. ಬಾಲಕಿಯರಿಗೆ ವಿದ್ಯೆ ಹೇಳಿ ಕೊಡಲು ಶಾಲೆಗೆ ಹೋದಾಗ ಅನೇಕರು ನಿಂದಿಸಿದರು. ಹಲ್ಲೆ ಮಾಡಿದರು. ಇಷ್ಟಾದರೂ ಛಲ ಬಿಡದೆ ತಮ್ಮ ಹಠ ಸಾಧಿಸಿದರು ಎಂದರು.

ಶಾರದಾ ಗಡ್ಡಿ ಮಾತನಾಡಿ, ಇಂದಿಗೂ ಹೆಣ್ಣು ಭ್ರೂಣಹತ್ಯೆ, ವರದಣೆ ಕಿರುಕುಳ, ಮರ್ಯಾದೆ ಹತ್ಯೆ, ಗ್ಯಾಂಗ್​ ರೇಪ್​ ಪ್ರಕರಣಗಳು ನಡೆಯುತ್ತಿರುವುದು ದುರಂತ. ಮಹಿಳೆಗೆ ಅಗೌರ ಆಗುತ್ತಿದೆ. ಸಾಂಸತಿಕ ಅಧ@ಪತನದತ್ತ ಸಮಾಜ ಸಾಗುತ್ತಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಸಾವಿತ್ರಿಬಾಯಿ ುಲೆ ಅವರ ಬಗ್ಗೆ ಅರಿತು ನಾವೆಲ್ಲ ನಮ್ಮ ಹಕ್ಕುಗಳಿಗೆ ಹೋರಾಡಬೇಕು ಎಂದು ಸಲಹೆ ನೀಡಿದರು.

ಸಂಚಾಲಕರಾದ ಹುಸೇನ್​ ಬಿ, ರಾಜೇಶ್ವರಿ, ಪಾರ್ವತಿ, ಗಂಗಮ್ಮ, ದೇವಿಕಾ ಇತರರಿದ್ದರು.