ಜಿಲ್ಲೆ

ಸಚಿನ್​ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ

Kopala - Raveendra V K

ಕೊಪ್ಪಳ: ಗುತ್ತಿಗೆದಾರ ಸಚಿನವ್​ ಪಂಚಾಳ್​ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮುದಾಯದ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಚಿನ್​ ಸಾವು ಸಮುದಾಯಕ್ಕೆ ನೋವು ತಂದಿದೆ. ಯುವಕರು ರಾಜಕಾರಣ, ಉದ್ಯಮಕ್ಕೆ ಬರುವುದು ಕಷ್ಟವಾಗುತ್ತಿದೆ. ಸಚಿನ್​ಗೆ ರಾಜಕೀಯ ಒತ್ತಡ ಹೆಚ್ಚಿ ಮಾನಸಿಕ ತೊಂದರೆಯಾಗಿದೆ. ವ್ಯವಸ್ಥೆ ಆತ್ಮಹತ್ಯೆಗೆ ಕಾರಣ. ಸರ್ಕಾರ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವಾನ ಹೇಳಬೇಕು ಎಂದು ಆಗ್ರಹಿಸಿದರು.

ಅಮಾಯಕ ಗುತ್ತಿಗೆದಾರರ ಮೇಲೆ ಒತ್ತಡ, ದಬ್ಬಾಳಿಕೆ, ದೌರ್ಜನ್ಯ ನಿಲ್ಲಬೇಕು. ಸಚಿನ್​ ಕುಟುಂಬಕ್ಕೆ ಆಸರೆಯಾಗಿದ್ದರು. ಸಾವಿಗೂ ಮುನ್ನ ಡೆತ್​ ನೋಟ್​ ಬರೆದಿಟ್ಟಿದ್ದು, ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು. ನ್ಯಾಯಾಂಗ ತನಿಖೆಗೆ ಪ್ರಕರಣ ನೀಡಬೇಕು. ಸಾವಿಗೆ ಕಾರಣರಾದವರಿಗೆ ಶಿೆಯಾಗಬೇಕು. ಸಚಿನ್​ ಕುಟುಂಬಕ್ಕೆ ಪರಿಹಾರದ ಜತೆಗೆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಗರದ ಅಶೋಕ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯತು.

ಲೇಬಗೇರಿ ನಾಗಮೂರ್ತೇಂದ್ರ ಮಹಾ ಸ್ವಾಮಿಗಳು, ನಾಗಲಿಂಗ ಮಹಾ ಸ್ವಾಮಿಗಳು, ಸಿರಸಪ್ಪಯ್ಯ ಸ್ವಾಮಿಗಳು, ಮುದ್ದಾಬಳ್ಳಿಯ ಗುರುನಾಥ ಸ್ವಾಮಿಗಳು, ಗಿಣಗೇರಿಯ ಶ್ರೀಕಂಠ ಸ್ವಾಮಿಗಳು, ವಿಶ್ವಕರ್ಮ ಸಮುದಾಯ ಜಿಲ್ಲಾಧ್ಯಕ್ಷ ನಾಗೇಶ ಕುಮಾರ ಕಮ್ಸಾಳ, ಗೌರವಾಧ್ಯಕ್ಷ ಈಶಪ್ಪ ಬಡಿಗೇರ, ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಡಿಗೇರ, ತಾಲೂಕು ಅಧ್ಯಕ್ಷರಾದ ದೇವೇಂದ್ರಪ್ಪ ಬಡಿಗೇರ, ಶಂಕ್ರಪ್ಪ ಬಡಿಗೇರ, ಕಾಳೇಶ ಬಡಿಗೇರ, ದೇವಪ್ಪ ಬಡಿಗೇರ, ಸೂಗೂರೇಶ್ವರ ಅಕ್ಕಸಾಲಿ ಇತರರಿದ್ದರು.